Friday, May 17, 2024
Homeಕರಾವಳಿಕುಸಿಯುವ ಭೀತಿಯಲ್ಲಿದೆ ಕೊಪ್ಪತ್ತಡ್ಕ ಸೇತುವೆ.. ಎಚ್ಚೆತ್ತುಕೊಳ್ಳಬೇಕಿದೆ ಲೋಕೋಪಯೋಗಿ ಇಲಾಖೆ

ಕುಸಿಯುವ ಭೀತಿಯಲ್ಲಿದೆ ಕೊಪ್ಪತ್ತಡ್ಕ ಸೇತುವೆ.. ಎಚ್ಚೆತ್ತುಕೊಳ್ಳಬೇಕಿದೆ ಲೋಕೋಪಯೋಗಿ ಇಲಾಖೆ

spot_img
- Advertisement -
- Advertisement -

ಸುಳ್ಯ: ಹರಿಹರ ಪಲ್ಲತ್ತಡ್ಕ ಕಿರಿಭಾಗ ಬಾಳುಗೋಡು ರಸ್ತೆಯಲ್ಲಿರುವ ಕೊಪ್ಪತ್ತಡ್ಕ ಕಿರು ಸೇತುವೆ ತಡೆಬೇಲಿ ಕಿತ್ತು ಹೋಗಿದ್ದು ಸ್ವಲ್ಪವೇ ಉಳಿದಿದೆ,ಒಂದು ಭಾಗದ ತಡೆಗೋಡೆ ಕೂಡ ಕುಸಿಯುವ ಭೀತಿಯಲ್ಲಿದೆ.ಈ ಸೇತುವೆ ಕಿರಿದಾಗಿದ್ದು ಒಂದು ಲಘು ವಾಹನ ಮಾತ್ರ ಸಂಚರಿಸಲು ಅವಕಾಶವಿದೆ. ಈ ರಸ್ತೆಯಲ್ಲಿ ದಿನದಲ್ಲಿ ನೂರಾರು ವಾಹನಗಳು ಸಂಚರಿಸುತ್ತವೆ. ಶಾಲಾ,ಕಾಲೇಜು ವಿದ್ಯಾರ್ಥಿಗಳು ಕೂಡ ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ವೇಳೆ ಈ ಸೇತುವೆ ಮೇಲೆ ಕೂಡ ನೀರು ಬರುತ್ತದೆ.

ತಡೆಗೋಡೆಯಲ್ಲಿ ಬಿರುಕು

ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆಯ ಪಿಲ್ಲರ್ ಹಾಗೂ ಸ್ಲ್ಯಾಬ್ ಕೂಡ ಬಿರುಕು ಬಿಟ್ಟಿದೆ. ಬೃಹತ್ ಗಾತ್ರದ ಮರ ನೀರಿನಲ್ಲಿ ಬರುವಾಗ ಪಿಲ್ಲರ್ ಗೆ ಗುದ್ದಿ ಹಾನಿಯಾಗಿದೆ. ಮಳೆಗಾಲದಲ್ಲಿ ಸಂಚರಿಸುವುದು ಅಪಾಯವೇ ಸರಿ. ಸೇತುವೆ ಮೇಲೆ ವಾಹನ ಬಂದರಂತೂ ಬದಿಗೆ ನಿಲ್ಲಲೂ ಜಾಗವಿಲ್ಲ, ಮಕ್ಕಳು ಎಲ್ಲಿಯಾದ್ರೂ ತಡೆಬೇಲಿ ಹಿಡಿದು ಬದಿಗೆ ನಿಂತರೇ ಬೇಲಿ ಜೊತೆಗೆ ಹೊಳೆಗೆ ಬೀಳುವ ಹಂತದಲ್ಲಿದೆ. ಅದು ಅಲ್ಲದೇ ಸೇತುವೆ ಮೇಲೆ ಕೆಸರು ನಿಂತಿದೆ, ಜಾರಿ ಬಿದ್ದರೇ ಹೊಳೆ ಪಾಲಾಗುವುದರಲ್ಲಿ ಸಂಶಯವಿಲ್ಲ ಹರಿಹರದಿಂದ ಬಾಳುಗೋಡು ಸಂಚರಿಸುವವರಿಗೆ ಈ ರಸ್ತೆ ಹತ್ತಿರವಾಗಿದ್ದು ಸೇತುವೆಯನ್ನು ಮೇಲ್ದರ್ಜೆಗೆರಿಸುವ ಅಗತ್ಯತೆ ಇದೆ.

ತಡೆಗೋಡೆ ಇಲ್ಲದೆ ಕೆಸರು ಮಾಯವಾಗಿರುವ ರಸ್ತೆ

ಬಾಳುಗೋಡನ್ನು ಸಂಪರ್ಕಿಸುವ ಇನ್ನೊಂದು ಮುಖ್ಯ ರಸ್ತೆ ಅರಣ್ಯ ಪ್ರದೇಶದಲ್ಲಿ ಹಾದುಹೋಗುವುದರಿಂದ ಕಾಡು ಪ್ರಾಣಿಗಳ ಉಪಟಳವು ಇದೆ. ಹಾಗಾಗಿ ಜನ ಈ ರಸ್ತೆಯನ್ನೆ ಹೆಚ್ಚಾಗಿ ಅವಲಂಬಿಸಿದ್ದಾರೆ. ಬಾಳುಗೋಡನ್ನು ಸಂಪರ್ಕಿಸುವ ಈ ಎರಡು ರಸ್ತೆಯಲ್ಲಿರುವ ಎರಡು ಸೇತುವೆಗಳು ಮುಳುಗು ಸೇತುವೆಗಳೇ, ಕಳೆದ ಸಲ ಭಾರಿ ಮಳೆಗೆ ದ್ವೀಪವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು, ಶಾಸಕರು ಭೇಟಿ ನೀಡಿ ಪರಿಶೀಲಿಸಿ ಗಮನಹರಿಸುವುದು ಒಳಿತು.

- Advertisement -
spot_img

Latest News

error: Content is protected !!