- Advertisement -
- Advertisement -
ಕೊಯಿಲ: ಪುತ್ತೂರು ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಗ್ರಾಮದ ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ದುರಸ್ಥಿ ಕಾಮಗಾರಿಗೆ 3 ಲಕ್ಷದ 50 ಸಾವಿರ ರೂಪಾಯಿ ಮಂಜೂರು ಮಾಡಲಾಗಿದೆ
ಈ ಕುರಿತು ಮಾಹಿತಿ ನೀಡಿರುವ ನೆಲ್ಯಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ಸರ್ವೋತ್ತಮ ಗೌಡ, ಶಾಲೆಯ ಹಳೆಯ ಕಟ್ಟಡದ ಮಾಡು ಸಂಪೂರ್ಣ ಹಾನಿಗೀಡಾಗಿದ್ದು, ಮಳೆಗಾಲದಲ್ಲಿ ತೀರಾ ಅಪಾಯ ಕಾಡುವಂತಿದೆ. ಹೀಗಾಗಿ ದ.ಕ. ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾಧಿಕಾರಿ ಮಳೆಹಾನಿ ನಿಧಿಯಿಂದ ಕಟ್ಟಡದ ಮಾಡು ದುರಸ್ಥಿಗೆ 2 ಲಕ್ಷ ರೂಪಾಯಿ ಮಂಜೂರು ಮತ್ತು ಜಿಲ್ಲಾ ಪಂಚಾಯತ್ ಕಟ್ಟಡ ಸೇರ್ಪಡೆ ಮಾರ್ಪಾಡು ನಿಧಿಯಿಂದ ಶಾಲಾ ಕಚೇರಿ ನೆಲಕ್ಕೆ ಟೈಲ್ಸ್ ಹಾಸುವುದಕ್ಕಾಗಿ 1.50 ಲಕ್ಷ ಸೇರಿದಂತೆ ಒಟ್ಟು 3.50 ಲಕ್ಷ ರೂಪಾಯಿ ಮಂಜೂರು ಆಗಿರುವುದಾಗಿ ತಿಳಿಸಿದ್ದಾರೆ.
ಶಾಲೆಯ ಮಾಡು ರಿಪೇರಿ ಕಾಮಗಾರಿ ನಡೆಯುತ್ತಿದ್ದು, ಟೈಲ್ಸ್ ಹಾಸುವ ಕಾಮಗಾರಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
- Advertisement -