Saturday, June 6, 2026
Homeಕರಾವಳಿಉಡುಪಿಶಾಕಿಂಗ್: ಉಡುಪಿಯಲ್ಲಿ ಇಂದು ಮತ್ತೆ 16 ಮಂದಿಗೆ ಸೋಂಕು- ದ.ಕ ದಲ್ಲಿ 3 ಹೊಸ ಪ್ರಕರಣ

ಶಾಕಿಂಗ್: ಉಡುಪಿಯಲ್ಲಿ ಇಂದು ಮತ್ತೆ 16 ಮಂದಿಗೆ ಸೋಂಕು- ದ.ಕ ದಲ್ಲಿ 3 ಹೊಸ ಪ್ರಕರಣ

- Advertisement -
- Advertisement -

ಮಂಗಳೂರು: ಇಂದು ಮದ್ಯಾಹ್ನದ ವೇಳೆಗೆ ಉಡುಪಿ ಜಿಲ್ಲೆಯಲ್ಲಿ 16 ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಹೊಸ ಕೊರೋನಾ ಪ್ರಕರಣ ಪತ್ತೆಯಾಗಿದೆ.

ಇದರಿಂದ ಉಡುಪಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 92 ಕ್ಕೆ ಏರಿಕೆಯಾಗಿದೆ. ಉಡುಪಿಯಲ್ಲಿ ಇಂದು ಕಂಡು ಬಂದ 16 ಸೋಂಕಿತರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಪ್ರಯಾಣಿಕರಾಗಿದ್ದಾರೆ. ಇವರಿಬ್ಬರು ದುಬೈನಿಂದ ಆಗಮಿಸಿದ್ದರು. ಉಳಿದ 14 ಮಂದಿಯೂ ಮಹಾರಾಷ್ಟ್ರದಿಂದ ಪ್ರಯಾಣಿಸಿದವರಾಗಿದ್ದಾರೆ.

ಇಂದು ಕರಾವಳಿ ಜಿಲ್ಲೆಯಲ್ಲಿ ಕಂಡು ಬಂದಿರುವ ಒಟ್ಟು ಕೇಸುಗಳ ಮೂಲ ಮಹಾರಾಷ್ಟ್ರದ ಸಂಪರ್ಕದಿಂದ ಬಂದಿದೆ ಎಂದು ಸರಕಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ವರದಿಯಾಗಿದೆ.

ರಾಜ್ಯದಲ್ಲಿ ಇಂದು 69 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 2158ಕ್ಕೆ ಏರಿಕೆಯಾಗಿದೆ. ಇದರಲ್ಲಿ 680 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 53 ಜನ ಸೋಂಕಿನ ಕಾರಣದಿಂದ ಸಾವನ್ನಪ್ಪಿದರೆ, ಇಬ್ಬರು ಸೋಂಕಿತರು ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾರೆ.

- Advertisement -

Latest News

error: Content is protected !!