Thursday, May 2, 2024
Homeತಾಜಾ ಸುದ್ದಿಕೆ.ಜಿ ಹಳ್ಳಿ ಪ್ರಕರಣದ ಗಲಭೆಕೋರರ ಆಸ್ತಿ ಮುಟ್ಟುಗೋಲು: ಗೃಹ ಸಚಿವ ಬೊಮ್ಮಾಯಿ

ಕೆ.ಜಿ ಹಳ್ಳಿ ಪ್ರಕರಣದ ಗಲಭೆಕೋರರ ಆಸ್ತಿ ಮುಟ್ಟುಗೋಲು: ಗೃಹ ಸಚಿವ ಬೊಮ್ಮಾಯಿ

spot_img
- Advertisement -
- Advertisement -

ಬೆಂಗಳೂರು : ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಉಂಟುಮಾಡಿದ್ರೇ, ನಷ್ಟ ಉಂಟು ಮಾಡಿದವರಿಂದಲೇ ವಸೂಲಿ ಮಾಡಬೇಕು ಎಂಬುದಾಗಿ ದೇಶದ ಸರ್ವೋಚ್ಛ ನ್ಯಾಯಾಲಯದ ಆದೇಶವಿದೆ. ಈ ಆದೇಶದಂತೆಯೇ ನಿನ್ನೆ ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಲ್ಲಿ ಹಾನಿಯಾದ ನಷ್ಟವನ್ನು ಗಲಭೆಕೋರರಿಂದಲೇ ವಸೂಲಿ ಮಾಡಲು ನಿರ್ಧಾರ ಮಾಡಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.


ಈ ನಿರ್ಧಾರದ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ನಿನ್ನೆ ನಡೆದಂತ ಕೆಜಿ ಹಳ್ಳಿ, ಡಿಜೆ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಉದ್ವಿಗ್ನತೆ ಈಗಾಗಲೇ ನಿಯಂತ್ರಣಕ್ಕೆ ಬಂದಿದೆ.ಈಗಾಗಲೇ ಈ ಸಂಬಂಧ ನೂರಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಕುರಿತಂತೆ ಘಟನೆಯಲ್ಲಿ ಭಾಗಿಯಾದ ಎಲ್ಲಾ ವ್ಯಕ್ತಿಗಳ ಪತ್ತೆ ಕಾರ್ಯ ನಡೆದಿದೆ ಎಂಬುದಾಗಿ ತಿಳಿಸಿದರು.

ಇನ್ನೂ ಮುಂದುವರೆದು, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಯಿಂದ ಅಪಾರ ಸಾರ್ವಜನಿಕ ಆಸ್ತಿಪಾಸ್ತಿಗಳು ಹಾನಿಯಾಗಿವೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೀಗೆ ನಷ್ಟ ಉಂಟು ಮಾಡಿದಂತವರಿದಂಲೇ ನಷ್ಟವನ್ನು ವಸೂಲಿ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಗಲಭೆಗೆ ಕಾರಣರಾಗಿ ಹಾನಿ ಮಾಡಿದಂತವರಿಂದಲೇ ನಷ್ಟವನ್ನು ವಸೂಲಿ ಮಾಡಲಾಗುತ್ತದೆ ಎಂಬುದಾಗಿ ಹೇಳಿದ್ರು.

- Advertisement -
spot_img

Latest News

error: Content is protected !!