Thursday, June 4, 2026
Homeತಾಜಾ ಸುದ್ದಿಎಸ್ಸೆಸೆಲ್ಸಿಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ ಅಷ್ಟೊಂದು ಕುಣಿದು ಕುಪ್ಪಳಿಸಿದ ಆ ಹುಡುಗ ಯಾರು ಗೊತ್ತಾ?

ಎಸ್ಸೆಸೆಲ್ಸಿಯಲ್ಲಿ ಜಸ್ಟ್ ಪಾಸ್ ಆಗಿದ್ದಕ್ಕೆ ಅಷ್ಟೊಂದು ಕುಣಿದು ಕುಪ್ಪಳಿಸಿದ ಆ ಹುಡುಗ ಯಾರು ಗೊತ್ತಾ?

- Advertisement -
- Advertisement -

ಬಾಗಲಕೋಟೆ :  ಎಸ್ ಎಸ್ ಎಲ್ ಸಿ ಪಾಸ್ ಆಗಿರೋ ವಿದ್ಯಾರ್ಥಿಯೊಬ್ಬ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ ವಿಡಿಯೋವೊಂದು, ಫೇಸ್‍ಬುಕ್, ವಾಟ್ಸಾಫ್, ಇನ್‍ಸ್ಟಾಗ್ರಾಮ್ ಗಳಂತಹ ಸಾಮಾಜಿಕ ತಾಣದಲ್ಲಿ ಫುಲ್ ವೈರಲ್ ಆಗಿದೆ. ನೀವೆಲ್ಲಾ ಆ ವಿಡಿಯೋ ನೋಡಿರ್ತೀರಾ.. ಅಷ್ಟಕ್ಕೂ ಆ ಹುಡುಗ ಯಾರು ಗೊತ್ತಾ?

ಈತ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಆರ್ ಎಂಎಸ್ ಎ ಪ್ರೌಢಶಾಲೆಯ ಹನುಮಂತ ದನಗಾರ ಎಂಬ ವಿದ್ಯಾರ್ಥಿ ಎಸ್ಸೆಸೆಲ್ಸಿಯಲ್ಲಿ  ಕೇವಲ 330 ಅಂಕ ಬಂದು ಪಾಸಾದರೂ, ಸಂತಸದಲ್ಲಿ ಭರ್ಜರಿಯಾಗಿ ಕುಣಿದು ಸಂಭ್ರಮಿಸಿದ್ದಾನೆ.

ಜಸ್ಟ್ ಪಾಸ್ ಆಗಿರೋ ಈ ಹುಡುಗ  ತನ್ನ ರಿಸಲ್ಟ್ ನೋಡಿದ ಬಳಿಕ, ನಾ ಎಸ್ಸೆಸೆಲ್ಸಿ ಪಾಸ್ ಆದ್ನೋ.. ನಾ ಟೆಂನ್ತ್       ಪಾಸ್ ಆಗೇನಿ ಎಂದು ಎದೆ ಬಡಿದುಕೊಂಡು ಕುಣಿದಾಡಿದ್ದಾನೆ. ಈತನ ಸಂಭ್ರಮ ಇಷ್ಟಕ್ಕೆ ನಿಂತಿಲ್ಲ, ಪಾಸ್ ಆದ ಖುಷಿಯಲ್ಲಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಬಿಸಾಕಿ ನಲಿದಾಡಿದ್ದಾನೆ.

ಹನುಮಂತನ ಈ ಸಂಭ್ರಮಕ್ಕೆ ಕಾರಣ ರಿಸಲ್ಟ್ ಬರೋ ಮೊದಲು, ಕೆಲವರು ನೀನು ಎಸ್ಸೆಸೆಲ್ಸಿ ಪಾಸ್ ಆಗೋದಿಲ್ಲ ಎಂದು ಛೇಡಿಸಿದ್ದರಂತೆ. ಇಷ್ಟೇ ಅಲ್ದೇ ಕೆಲ ಶಿಕ್ಷಕರು ಕೂಡಾ ನೀನು ಪಾಸ್ ಆಗೋದು ಡೌಟ್ ಅಂದಿದ್ರಂತೆ. ಆದ್ರೆ ಅವರೆಲ್ಲರ ಲೆಕ್ಕಾಚಾರ ಉಲ್ಟಾ ಮಾಡಿರೋ ಹನುಮಂತ ದನಗಾರ ಈಗ ಪಾಸ್ ಆಗಿದ್ದಾನೆ. ಹೀಗಾಗಿ ಆತನ ಸಂತಸ ಮುಗಿಲು ಮುಟ್ಟಿದೆ. ಇನ್ನು ಈ ವಿಡಿಯೋ ಭಾರೀ ವೈರಲ್ ಆಗಿದ್ದು ಅನೇಕರು ಇದು ನಮ್ಮದೇ ಕಥೆ ಅಂತಾ ಹೇಳೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.

SSLC ಯಲ್ಲಿ‌ ಜಸ್ಟ್ ಪಾಸ್ ಆಗಿದಕ್ಕೆ ಕುಣಿದು ಕುಪ್ಪಳಿಸಿದ ಹುಡುಗ..

Posted by Maha Xpress on Wednesday, 12 August 2020

- Advertisement -

Latest News

error: Content is protected !!