Sunday, April 28, 2024
HomeUncategorizedಡ್ರೋನ್ ಪ್ರತಾಪ್ ರನ್ನು ಕಿರಿಕ್ ಕೀರ್ತಿ ಅಷ್ಟು ತಾಳ್ಮೆಯಿಂದ ಮಾತನಾಡಿಸಿದ್ದು ಯಾಕೆ? ಸಂದರ್ಶನದ ಬಳಿಕ ಕೀರ್ತಿ...

ಡ್ರೋನ್ ಪ್ರತಾಪ್ ರನ್ನು ಕಿರಿಕ್ ಕೀರ್ತಿ ಅಷ್ಟು ತಾಳ್ಮೆಯಿಂದ ಮಾತನಾಡಿಸಿದ್ದು ಯಾಕೆ? ಸಂದರ್ಶನದ ಬಳಿಕ ಕೀರ್ತಿ ಹೇಳಿದ ವಿಚಾರಗಳೇನು?

spot_img
- Advertisement -
- Advertisement -

ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದವರು ಡ್ರೋನ್ ಪ್ರತಾಪ್. ಇಷ್ಟು ದಿನ ಕಾಗೆ ಹಾರಿಸುತ್ತಲೇ ಬಂದಿದ್ದಾರೆ ಡ್ರೋನ್ ಪ್ರತಾಪ್ ಅನ್ನೋದು ಇದೀಗ ಕನ್ಫರ್ಮ್ ಆಗಿದೆ. ಇಷ್ಟು ದಿನ ಕೈಗೆ ಸಿಗದೇ ಇದ್ದ ಪ್ರತಾಪ್ ನಿನ್ನೆ ಖಾಸಗಿ ವಾಹಿನಿಯೊಂದರ ಸ್ಟುಡಿಯೋದಲ್ಲಿ ಪ್ರತ್ಯಕ್ಷವಾಗಿದ್ದರು. ಪ್ರತಾಪ್ ಅವರು ವಾಹಿನಿಯ ಮೂಲಕ ಅವರ ವಿರುದ್ಧ ಕೇಳಿ ಬಂದಿದ್ದ ಆರೋಪಗಳಿಗೆ ಉತ್ತರ ಕೊಡ್ತಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು.ಆದ್ರೆ ಆಗಿದ್ದೇ ಬೇರೆ. ಪ್ರತಾಪ್ ಜನರಲ್ಲಿ ಅವರ ಬಗ್ಗೆ ಮತ್ತಷ್ಟು ಅನುಮಾನ ಹುಟ್ಟುವ ಹಾಗೇ ಮಾಡಿದ್ರು.

ಇನ್ನು ಡ್ರೋನ್ ಪ್ರತಾಪ್ ಅವರನ್ನು ಸಂದರ್ಶನ ಮಾಡಿದ ಕಿರಿಕ್ ಕೀರ್ತಿ ಅವರ ಬಗ್ಗೆಯೂ ಜನ ಅಸಮಾಧಾನ ಹೊರ ಹಾಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕಿರಿಕ್ ಕೀರ್ತಿ ಅವರನ್ನು ಟ್ರೋಲ್ ಕೂಡ ಮಾಡಿದ್ರು. ಅವರು ಪ್ರಶ್ನೆ ಕೇಳಿದ್ದು ಸರಿಯಿಲ್ಲ. ಹಾಗೇ ಕೇಳ್ಬೇಕಿತ್ತು. ಹೀಗೆ ಕೇಳ್ಬೇಕಿತ್ತು ಅಂತಾ ಉಪದೇಶ ಕೊಟ್ಟಿದ್ದಾರೆ. ಇದಕ್ಕೆಲ್ಲಾ ಸೋಷಿಯಲ್ ಮೀಡಿಯಾದ ಮೂಲಕವೇ ಕಿರಿಕ್ ಕೀರ್ತಿ ಉತ್ತರ ಕೊಟ್ಟಿದ್ದಾರೆ. ಯಾಕೆ ಅಷ್ಟು ತಾಳ್ಮೆಯಿಂದ ಪ್ರತಾಪ್ ರನ್ನು ಪ್ರಶ್ನಿಸಿದೆ, ಇಲ್ಲಾ ಅಂದರೆ ಏನಾಗುತ್ತಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ವಿಡಿಯೋ ಒಂದರ ಮೂಲಕ ಕ್ಲ್ಯಾರಿಫಿಕೇಷನ್ ಕೊಟ್ಟಿದ್ದಾರೆ.

ಡ್ರೋನ್ ಪ್ರತಾಪ್ ಸಂದರ್ಶನದ ನಂತರ… ಏನು ಎತ್ತ…? ನಿಮ್ಮ‌ಅನುಮಾನಗಳಿಗೆ ಉತ್ತರಿಸುತ್ತಾ…l Drone Prathap l Kirik Keerthi ಪೂರ್ತಿ ವೀಡಿಯೋ ನೋಡಿ ಕಮೆಂಟ್ ಮಾಡಿ…ಈಗಲೂ ಅದೇ ತಪ್ಪು ಮಾಡಬೇಡಿ…

Posted by ಕಿರಿಕ್ ಕೀರ್ತಿ – Kirik Keerthi on Friday, 17 July 2020

- Advertisement -
spot_img

Latest News

error: Content is protected !!