Monday, June 8, 2026
Homeಇತರಕೋಡಿಂಬಾಳ: ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ...! ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದ ಅರಣ್ಯ...

ಕೋಡಿಂಬಾಳ: ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ…! ಹಾವನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದ ಅರಣ್ಯ ಇಲಾಖೆ…!

- Advertisement -
- Advertisement -

ಕೋಡಿಂಬಾಳ: ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಉಜಿರಡ್ಕದ ಮನೆಯೊಂದರ ಸಮೀಪ ಅವಿತು ಕುಳಿತ್ತಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ನಿನ್ನೆ ನಡೆದಿದೆ.

ಉಜಿರಡ್ಕ ಸುಂದರ ಎಂಬವರ ಮನೆಯ ಸಮೀಪದಲ್ಲಿ ಇರುವ ಕಟ್ಟಿಗೆಯ ರಾಶಿಯ ಮಧ್ಯದಲ್ಲಿ ಸುಮಾರು 15-18 ಅಡಿ ಉದ್ದದ ಕಾಳಿಂಗ ಸರ್ಪ ಬಂದು ಸೇರಿಕೊಂಡಿತ್ತು, ಇದನ್ನು ಗಮನಿಸಿದ ಮನೆಯವರು ಸ್ಥಳೀಯರ ಮೂಲಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು.

ಹಾವನ್ನು ಹಿಡಿಯಲು ಸುಬ್ರಹ್ಮಣ್ಯದ ಮಾಧವ ಎಂಬವರನ್ನು ಸಂಪರ್ಕಿಸಲಾಗಿದ್ದು ಅವರು ಆಗಮಿಸಿ ಹಾವನ್ನು ಹಿಡಿದಿದ್ದಾರೆ. ಬಳಿಕ ಇಲಾಖೆಯ ವಾಹನದಲ್ಲಿ ಬಿಸಿಲೆಘಾಟ್ ಗೆ ಕೊಂಡೊಯ್ಯಲಾಯಿತು.

ಈ ಸಂದರ್ಭದಲ್ಲಿ ಉಪವಲಯ ಅರಣ್ಯಾದಿಕಾರಿ ಅಜಿತ್, ಗಾರ್ಡ್ ಗಳಾದ ವಿಶ್ವನಾಥ, ಸುಬ್ರಹ್ಮಣ್ಯ, ದೇವಿಪ್ರಸಾದ್, ಸ್ಥಳೀಯ ಸಾಮಾಜಿಕ ಮುಂದಾಳು ರಘುರಾಮ ಉಪಸ್ಥಿತರಿದ್ದರು.

ಕಾಳಿಂಗ ಸರ್ಪ ಇರುವ ಸುದ್ದಿ ತಿಳಿದು ನೂರಾರು ಮಂದಿ ಸ್ಥಳೀಯರು ತಂಡೋಪತಂಡವಾಗಿ ಆಗಮಿಸಿ ಕುತೂಹಲದಿಂದ ನೋಡುತ್ತಿರುವುದು ಕಂಡು ಬಂತು.

- Advertisement -

Latest News

error: Content is protected !!