Monday, June 30, 2025
Homeಮನರಂಜನೆನಿಮ್ಮನ್ನು ಜೊತೆಯಾಗಿ ನೋಡೋದೇ ಖುಷಿ ಅಂತಾ ಸುದೀಪ್ ದಿಗಂತ್- ಐಂದ್ರಿತಾಗೆ ಹೇಳಿದ್ದ್ಯಾಕೆ?

ನಿಮ್ಮನ್ನು ಜೊತೆಯಾಗಿ ನೋಡೋದೇ ಖುಷಿ ಅಂತಾ ಸುದೀಪ್ ದಿಗಂತ್- ಐಂದ್ರಿತಾಗೆ ಹೇಳಿದ್ದ್ಯಾಕೆ?

spot_img
- Advertisement -
- Advertisement -

ಬೆಂಗಳೂರು: ದಿಗಂತ್ ಮಂಚಾಲೆ ಮತ್ತು ಐಂದ್ರಿತಾ ದಂಪತಿ 8 ವರ್ಷಗಳ ಬಳಿಕ ಈಗ ಮತ್ತೆ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎನ್ನುವ ಸಿನಿಮಾವೊಂದರ ಚಿತ್ರೀಕರಣದಲ್ಲಿ ಇಬ್ಬರೂ ಮಲೆನಾಡಿನಲ್ಲಿ ಬ್ಯುಸಿಯಾಗಿದ್ದಾರೆ.

ಐಂದ್ರಿತಾ ಈ ಸಿನಿಮಾದ ಚಿತ್ರೀಕರಣವೊಂದರ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ‘ನನ್ನ ಆಫ್ ಸ್ಕ್ರೀನ್ ಲವ್ ಜತೆಗೆ ಮತ್ತೆ ಆನ್ ಸ್ಕ್ರೀನ್ ನಲ್ಲಿ 8 ವರ್ಷಗಳ ಬಳಿಕ ನಟಿಸುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ಕಿಚ್ಚ ಸುದೀಪ್ ಕಾಮೆಂಟ್ ಮಾಡಿದ್ದು ‘ನೀವಿಬ್ಬರೂ ಕಮ್ ಬ್ಯಾಕ್ ಮಾಡುತ್ತಿರುವುದು, ಮತ್ತೆ ಜತೆಯಾಗಿ ನೋಡುತ್ತಿರುವುದೇ ಖುಷಿ’ ಎಂದು ಇಬ್ಬರಿಗೂ ವಿಶ್ ಮಾಡಿದ್ದಾರೆ. ಇನ್ನು, ಕಿಚ್ಚ ಸುದೀಪ್ ಹೊಗಳಿಕೆಗೆ ಆಂಡಿ-ದಿಗ್ಗಿ ಜೋಡಿ ಧನ್ಯವಾದವನ್ನೂ ಸಲ್ಲಿಸಿದ್ದಾರೆ.

- Advertisement -
spot_img

Latest News

error: Content is protected !!