ಬೆಂಗಳೂರು; ಕನ್ನಡದ ಅತೀದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್. ಕಳೆದ 11 ವರ್ಷಗಳಿಂದ ಕಿಚ್ಚ ಸುದೀಪ್ ಅವರು ಈ ಶೋವನ್ನು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಇದೀಗ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಅವರು ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ. ಮುಂದಿನ ಸೀಸನ್ ಯಿಂದ ನಾನು ಬಿಗ್ ಬಾಸ್ ಶೋವನ್ನು ಹೋಸ್ಟ್ ಮಾಡಲ್ಲ ಎಂದು ಕಿಚ್ಚ ಘೋಷಿಸಿದ್ದಾರೆ.ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಅಭೂತಪೂರ್ವ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು ಕಾರ್ಯಕ್ರಮ ಮತ್ತು ನನ್ನ ಮೇಲೆ ತೋರಿಸಿದ ಅಭಿಮಾನಕ್ಕೆ ಟಿವಿಆರ್ ನಂಬರ್ ಸಾಕ್ಷಿಯಾಗಿದೆ. 11 ವರ್ಷಗಳು ಬಿಗ್ ಜೊತೆ ಪ್ರಯಾಣ ಮಾಡಿದ್ದು ಅತ್ಯುತ್ತಮ ಅನುಭವ. ಬಿಗ್ ಬಾಸ್ ನಿರೂಪಕನಾಗಿ ಇದು ನನ್ನ ಕೊನೆ ಆವೃತ್ತಿ. ನನ್ನ ನಿರ್ಧಾರಕ್ಕೆ ಕಲರ್ಸ್ ಕನ್ನಡ ವಾಹಿನಿ ಮತ್ತು ಬಿಗ್ ಬಾಸ್ ಕಾರ್ಯಕ್ರಮದ ಅಭಿಮಾನಿಗಳು ಗೌರವ ಕೊಡುತ್ತಾರೆ ಎಂದು ನಾನು ನಂಬಿದ್ದೇನೆ. ಈ ಆವೃತ್ತಿಯನ್ನು ಉತ್ತಮವಾಗಿಸೋಣ, ನಾನು ಶಕ್ತಿಮೀರಿ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತೇನೆ ಎಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಿಚ್ಚನ ಪೋಸ್ಟ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಯಾಕೆ ಸುದೀಪ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಅಂತಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.