Friday, May 10, 2024
Homeತಾಜಾ ಸುದ್ದಿಕೆಜಿಎಫ್ 2 ಟೀಸರ್ ಬಿಡುಗಡೆ: ಲೀಕ್​ ಆಗುವ ಭಯದಿಂದ ಇಂದೇ ಅಧಿಕೃತ ರಿಲೀಸ್ ಆದ ಟೀಸರ್​ಗೆ...

ಕೆಜಿಎಫ್ 2 ಟೀಸರ್ ಬಿಡುಗಡೆ: ಲೀಕ್​ ಆಗುವ ಭಯದಿಂದ ಇಂದೇ ಅಧಿಕೃತ ರಿಲೀಸ್ ಆದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್

spot_img
- Advertisement -
- Advertisement -

ಬೆಂಗಳೂರು: ಅಭಿಮಾನಿಗಳು ಕಾತುರದಿಂದ ಕಾದಿದ್ದ ಕೆಜಿಎಫ್ 2 ಟೀಸರ್ ಒಂದು ದಿನ ಮೊದಲೇ​ ಬಿಡುಗಡೆಯಾಗಿದೆ.

ಈ ಮೊದಲು ಜನವರಿ 8 ರಂದು ಅಂದ್ರೆ ಯಶ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಮಾಡಲಾಗುವುದು ಎಂದು ಹೊಂಬಾಳೆ ಪ್ರೊಡಕ್ಷನ್ ಹೌಸ್ ಹೇಳಿತ್ತು. ಇದೀಗ ಟ್ವೀಟ್ ಮೂಲಕ ಬದಲಾದ ಸಮಯವನ್ನ ತಿಳಿಸಿರುವ ಪ್ರಶಾಂತ್ ನೀಲ್ ಇಂದು ರಾತ್ರಿ 09:29ಕ್ಕೇ ಟೀಸರ್ ರಿಲೀಸ್ ಮಾಡಿದ್ದಾರೆ

ನಾಳೆ ರಿಲೀಸ್ ಆಗಬೇಕಿದ್ದ ಕೆಜಿಎಫ್ 2 ಟೀಸರ್ ಇಂದು ಆನ್​ಲೈನ್​ನಲ್ಲಿ ಲೀಕ್ ಆಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಲೀಕ್ ಆದ ಟೀಸರ್ ಹರಿದಾಡುತ್ತಿದೆ. ಈ ಹಿನ್ನೆಲೆ ಚಿತ್ರತಂಡ ಇಂದೇ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ.

ಕೆಜಿಎಫ್​-2 ನಲ್ಲಿ ರಾಕಿ ಭಾಯ್​ ಭರ್ಜರಿ ಎಂಟ್ರಿ ಕೊಟ್ಟಿದ್ದು, ಚಿತ್ರದ ಟೀಸರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಕೆಜಿಎಫ್​-1 ಚಿತ್ರದಲ್ಲಿ ‘ಪವರ್​ಫುಲ್​ ಪೀಪಲ್​ ಕೇಮ್​ ಫ್ರಮ್​ ಪವರ್​ಫುಲ್​ ಪ್ಲೇಸಸ್​’ ಎನ್ನುವ ಡೈಲಾಗ್​ ಬಳಕೆ ಮಾಡಲಾಗಿತ್ತು. ಈ ಬಾರಿ ‘ಪವರ್​ಫುಲ್​ ಪೀಪಲ್​ ಮೇಕ್​ ಪ್ಲೇಸಸ್​ ಪವರ್​ಫುಲ್​’ ಎನ್ನುವ ಡೈಲಾಗ್​ ಬಳಸಲಾಗಿದ್ದು, ಸಖತ್​ ಥ್ರಿಲ್​ ನೀಡಿದೆ.

ಅಲ್ಲದೆ, ಸಿನಿಮಾದಲ್ಲಿ ಸಂಜಯ್​ ದತ್​ ಹಾಗೂ ಯಶ್​ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಮೆಷಿನ್​ ಗನ್​ನಲ್ಲಿ ಬುಲೆಟ್​ ಹಾರಿಸೋದು, ಕಾದ ಗನ್ನಿನ ನಳಿಕೆ ಮೂಲಕ ರಾಕಿ ಭಾಯ್​ ಸಿಗರೇಟ್​ ಹಚ್ಚಿಕೊಳ್ಳೋ ದೃಶ್ಯಗಳು ಕಣ್ಣಿಗೆ ಸಾಕಷ್ಟು ಮುದ ನೀಡಿದೆ. ಇನ್ನು, ರವೀನಾ ಟಂಡನ್​ ರಾಜಕಾರಣಿ ಲುಕ್​ನಲ್ಲಿ ಮಿಂಚಿದ್ದಾರೆ.

- Advertisement -
spot_img

Latest News

error: Content is protected !!