ಕೇರಳ: ರಾಜ್ಯದ ಇಡುಕ್ಕಿ ಜಿಲ್ಲೆಯ ಕ್ಯಾಥೋಲಿಕ್ ಪಾದ್ರಿಯೊಬ್ಬರು ಮಹಿಳೆಯ ಜತೆ ಚರ್ಚ್‌ನಲ್ಲಿಯೇ ಸೆಕ್ಸ್ ನಡೆಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ರಾಜ್ಯದೆಲ್ಲೆಡೆ ಲಾಕ್‌ಡೌನ್ ಇರುವುದರಿಂದ ಚರ್ಚ್‌ಗೆ ಯಾರೂ ಬರುವುದಿಲ್ಲ ಎಂದು ಭಾವಿಸಿ ಫಾದರ್ ಜೇಮ್ಸ್ ಮಂಗಲಶೇರಿ ಎಂಬ ಧರ್ಮಗುರು ವಿವಾಹಿತ ಮಹಿಳೆಯೊಂದಿಗೆ ಚರ್ಚ್ ಆವರಣದಲ್ಲಿ ನಿರಂತರವಾಗಿ ರಾಸಲೀಲೆಯಲ್ಲಿ ತೊಡಗಿಸಿಕೊಂಡಿದ್ದ. ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.ಲಾಕ್‌ಡೌನ್ ಸಮಯದಲ್ಲಿಯೂ ಈಕೆ ನಿರಂತರವಾಗಿ ಚರ್ಚ್‌ಗೆ ಬಂದು ಫಾದರ್ ಜತೆಗಿದ್ದು ಹೋಗುತ್ತಿದ್ದಳು ಎನ್ನಲಾಗಿದೆ.

ಚರ್ಚ್‌ಗೆ ಬಂದ ಒಬ್ಬ ಭಕ್ತ ತನ್ನ ಮೊಬೈಲ್ ಫೋನ್‌ನಲ್ಲಿ ಈ ಫಾದರ್‌ನ ರಾಸಲೀಲೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ ಎಂದು ಕೆಲವು ಮೂಲಗಳು ಹೇಳುತ್ತಿವೆ. ಇನ್ನು ಕೆಲವು ಮೂಲಗಳ ಪ್ರಕಾರ, ಫಾದರ್ ತನ್ನ ಮೊಬೈಲ್ ಫೋನನ್ನು ರಿಪೇರಿಗೆಂದು ಕೊಟ್ಟಾಗ ಅದರಲ್ಲಿದ್ದ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಬಹಿರಂಗವಾಗಿವೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಚರ್ಚ್‌ನ ಆಡಳಿತ ಮಂಡಳಿಯವರು ಫಾದರ್‌ನನ್ನು ಸಸ್ಪೆಂಡ್ ಮಾಡಿ, ಚರ್ಚಿನ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಾರೆ. ಈ ಘಟನೆಯು ಮಾರ್ಚ್‌ನಲ್ಲೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.