Wednesday, May 8, 2024
Homeತಾಜಾ ಸುದ್ದಿಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡವ ಈಗ ಕೋಟ್ಯಾಧಿಪತಿ

ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡವ ಈಗ ಕೋಟ್ಯಾಧಿಪತಿ

spot_img
- Advertisement -
- Advertisement -

ದುಬೈ: ಅದೃಷ್ಟ ಅನ್ನೋದು ಯಾರಿಗೆ ಯಾವಾಗ ಬರುತ್ತೆ ಅಂತಾ ಹೇಳೋದಕ್ಕೆ ಸಾಧ್ಯಾನೇ ಇಲ್ಲ. ಲಾಕ್ ಡೌನ್ ನಲ್ಲಿ ಕೆಲ ಕಳೆದುಕೊಂಡವರು ಈಗ ಕೋಟ್ಯಾಧಿಪತಿಯಾಗಿದ್ದಾರೆ. ಕೇರಳದ ವ್ಯಕ್ತಿಯೊಬ್ಬರು ಕೊರೊನಾದಿಂದಾಗಿ ಕೆಲಸ ಕಳೆದುಕೊಂಡು ಕೆಲಸಕ್ಕಾಗಿ ಕಂಪೆನಿಗಳಿಗೆ ಅಲೆಯುತ್ತಿರುವಾಗಲೇ 7 ಕೋಟಿ ಜಾಕ್‍ಪಾಟ್ ಹೊಡೆಯುವ ಮೂಲಕ ಅವನ ಅದೃಷ್ಟವನ್ನೇ ಬದಲಿಸಿದೆ.

ಕೇರಳ ಮೂಲದ ನವನೀತ್ ಸಂಜೀವನ್ ಎಂಬುವವರು ದುಬೈನಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉತ್ತಮ ಕೆಲಸದಲ್ಲಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದರು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ಅವರು ಕೆಲಸ ಕಳೆದುಕೊಂಡಿದ್ದರು. ಆಗ ನವನೀತ್ ದುಬೈ ಡ್ಯೂಟಿ ಫ್ರೀ ರಾಫೆಲ್‍ನಲ್ಲಿ ಲಾಟರಿ ಟಿಕೆಟ್ ಖರೀದಿಸಿದ್ದರು, ಈಗ ಆ ನಂಬರ್‍ಗೆ 7.3 ಕೋಟಿ ರೂ. ಜಾಕ್‍ಪಾಟ್ ಹೊಡೆಯುವ ಮೂಲಕ ಅವರ ಬದುಕಿನ ದಿಕ್ಕನ್ನೇ ಬದಲಾಯಿಸಿದೆ.

ಇನ್ನು ಈ ಬಗ್ಗೆ ಮಾತನಾಡಿದ ನವನೀತ್, ಕೊರೊನಾ ಲಾಕ್‍ಡೌನ್‍ನಿಂದಾಗಿ ನಾನು ಕೆಲಸ ಕಳೆದುಕೊಂಡಾಗ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿತ್ತು, ಹಲವು ಕಂಪೆನಿಗಳಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದೆ, ಆದರೆ ಈಗ ನನ್ನ ಅದೃಷ್ಟ ಖುಲಾಯಿಸಿದ್ದು ನಾನು ಕೊಂಡ ಲಾಟರಿ ಟಿಕೆಟ್‍ಗೆ 7.3 ಕೋಟಿ ಬಂಪರ್ ಬಹುಮಾನ ಬಂದಿರುವುದು ನನ್ನ ಭವಿಷ್ಯ ಬದಲಾಯಿಸಿದೆ, ಈ ಬಹುಮಾನವನ್ನು ನನ್ನ ಕನಸನ್ನೆಲ್ಲಾ ನಿಜ ಮಾಡಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!