Sunday, June 29, 2025
Homeಕರಾವಳಿಕಾಸರಗೋಡುಹುಟ್ಟುಹಬ್ಬದ ದಿನವೇ ಕಾಸರಗೋಡಿನ ನಟಿಯ ನಿಗೂಢ ಸಾವು: ಪತಿ ಪೊಲೀಸ್‌ ವಶಕ್ಕೆ

ಹುಟ್ಟುಹಬ್ಬದ ದಿನವೇ ಕಾಸರಗೋಡಿನ ನಟಿಯ ನಿಗೂಢ ಸಾವು: ಪತಿ ಪೊಲೀಸ್‌ ವಶಕ್ಕೆ

spot_img
- Advertisement -
- Advertisement -

ಕಾಸರಗೋಡಿನ ಮೂಲದ ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ. 20 ವರ್ಷದ ನಟಿ ಶಹಾನಾ ಕೋಝಿಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.  ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ.

ರಾತ್ರಿ 11 ಗಂಟೆಗೆ ಪರಂಬಿಲ್ ಬಜಾರ್ ನಲ್ಲಿರುವ ಬಾಡಿಗೆ ಫ್ಲಾಟ್ ನಲ್ಲಿ ಶಹಾನಾ ಶವ ಕಿಟಕಿಯ ಗ್ರಿಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.

ಚೇವಾಯೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇದು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದಾರೆ. ಸದ್ಯ ಶಹಾನಾ ಪತಿ ಪರಂಬಿಲ್ ಬಜಾರ್ ಮೂಲದ ಸಜಾದ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಒಂದೂವರೆ ವರ್ಷದ ಹಿಂದೆ ಸಜಾದ್ ಮತ್ತು ಶಹಾನಾ ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ನಡೆಯುತ್ತಿತ್ತು ಎನ್ನಲಾಗಿದ್ದು ಕೌಟುಂಬಿಕ ದೌರ್ಜನ್ಯ ಹಾಗೂ ಕೊಲೆಯ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. 

ಶಹಾನಾ ಕುಟುಂಬದವರು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಹಾನಾ ತಾಯಿ ನನ್ನ ಮಗಳು ಯಾವಾಗಲೂ ತನ್ನ ಪತಿಯಿಂದ ಕೌಟುಂಬಿಕ ದೌರ್ಜನ್ಯದ ಎದುರಿಸುತ್ತಿದ್ದರು ಎಂದು ದೂರುತ್ತಿದ್ದಳು. ಅವಳು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳು ನಮ್ಮೆಲ್ಲರನ್ನು 20ನೇ ವರ್ಷದ ಹುಟ್ಟುಹಬ್ಬಕ್ಕೆ ಆಹ್ವಾನ ನೀಡಿದ್ದಳು ಎಂದು ಹೇಳಿದ್ದಾರೆ.

ಸದ್ಯ ಶಹಾನಾ ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು ಕೊಲೆಯೋ ಅಥವಾ ಆತ್ಮಹತ್ಯೆಯೊ ಎನ್ನುವುದು ಬಹಿರಂಗವಾಗಲಿದೆ. ಶಹಾನಾ ರೂಪದರ್ಶಿಯಾಗಿ ಖ್ಯಾತಿ ಗಳಿಸಿದ್ದರು. ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಹಾನಾ ದೊಡ್ಡ ನಟಿಯಾಗುವ ಕನಸು ಕಂಡಿದ್ದರು. ಆದರೆ ಕನಸು ನನಸಾಗುವ ಮೊದಲೇ ಸಹಾನಾ ಇಹಲೋಕ ತ್ಯಜಿಸಿದ್ದಾರೆ.

- Advertisement -
spot_img

Latest News

error: Content is protected !!