Thursday, April 25, 2024
Homeಕರಾವಳಿಕಾಸರಗೋಡುಅಬುದಾಬಿಯಲ್ಲಿ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಕೇರಳದ ವ್ಯಕ್ತಿ

ಅಬುದಾಬಿಯಲ್ಲಿ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಕೇರಳದ ವ್ಯಕ್ತಿ

spot_img
- Advertisement -
- Advertisement -

ದುಬೈ: ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ಭರ್ಜರಿ ಬಹುಮಾನ ದೊರೆತಿದೆ.  ದುಬೈನಲ್ಲಿ ಕೆಲಸ ಮಾಡುತ್ತಿರುವ ಎರ್ನಾಕುಲಂ ಮೂಲದ ಸೂರಜ್​ ಅನೀದ್​ (35) ಅವರಿಗೆ ಲಕ್ಕಿ ಡ್ರಾನಲ್ಲಿ ಬರೋಬ್ಬರಿ ಒಂದು ಮಿಲಿಯನ್​ ಯುಎಸ್​ ಡಾಲರ್ (7 ಕೋಟಿ ರೂ.) ಬಹುಮಾನ ಗೆದ್ದಿದ್ದಾರೆ.  

ಸೂರಜ್​ ಅವರು ಜನವರಿ 20ರಂದು ಆನ್​ಲೈನ್​ ಮೂಲಕ ಟಿಕೆಟ್​ ಖರೀದಿಸಿದ್ದರು. ​350ನೇ ಸರಣಿಯ ಟಿಕೆಟ್ ಸಂಖ್ಯೆ 4645 ಮೂಲಕ ಸೂರಜ್ ಅದೃಷ್ಟಶಾಲಿ ವಿಜೇತರಾಗಿದ್ದಾರೆ. ತಾವು ಜಯಶಾಲಿ ಆಗಿರುವ ವಿಚಾರ ಫೇಸ್​ಬುಕ್ ಲೈವ್​​ ಮೂಲಕ ಸೂರಜ್​ ಅವರಿಗೆ ತಿಳಿದಿದೆ. ವಿಜೇತರನ್ನು ಘೋಷಿಸಿದಾಗ ನನ್ನನ್ನು ನಾನೇ ನಂಬಲು ಆಗಲಿಲ್ಲ ಎಂದು ಸೂರಜ್​ ಹೇಳಿಕೊಂಡಿದ್ದಾರೆ.

ಅಂದಹಾಗೆ ಸೂರಜ್​ ದುಬೈ ಡ್ಯೂಟಿ ಫ್ರೀ ಲಕ್ಕಿ ಡ್ರಾನಲ್ಲಿ ವಿಜೇತರಾದ 175ನೇ ಭಾರತೀಯರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸೂರಜ್​ ಯುಎಇನಲ್ಲಿ ನೆಲೆಸಿದ್ದಾರೆ. ಬ್ಯಾಂಕ್​ ಒಂದರ ಕಸ್ಟಮರ್​ ಕೇರ್​ ವಿಭಾಗದಲ್ಲಿ ಸೂರಜ್​ ಕೆಲಸ ಮಾಡುತ್ತಿದ್ದು, ಅಬುದಾಬಿಯಲ್ಲಿ ಪತ್ನಿ ಮತ್ತು ಮಗಳೊಂದಿಗೆ ವಾಸವಿದ್ದಾರೆ. 

- Advertisement -
spot_img

Latest News

error: Content is protected !!