Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು: ಮಸೀದಿ ಕಟ್ಟಡ ತೆರವು ಮಾಡುವಾಗ ಕುಸಿತ; ಧರೆಗುರುಳಿದ ಹೈಟೆನ್ಶನ್ ವಿದ್ಯುತ್ ಕಂಬ

ಕಾಸರಗೋಡು: ಮಸೀದಿ ಕಟ್ಟಡ ತೆರವು ಮಾಡುವಾಗ ಕುಸಿತ; ಧರೆಗುರುಳಿದ ಹೈಟೆನ್ಶನ್ ವಿದ್ಯುತ್ ಕಂಬ

- Advertisement -
- Advertisement -

ಕಾಸರಗೋಡು:ಜೆಸಿಬಿ ಮೂಲಕ ಮಸೀದಿ ಕಟ್ಟಡ ತೆರವು ಮಾಡುತ್ತಿದ್ದಾಗ ಮುಂಭಾಗ ಕುಸಿದು ಬಿದ್ದ ಪರಿಣಾಮ ಹಲವಾರು ವಿದ್ಯುತ್ ಕಂಬಗಳು ಮುರಿಬಿದ್ದ ಘಟನೆ ಕೇರಳದ ಕಾಸರಗೋಡು ನಗರ ಹೊರವಲಯದ ನುಳ್ಳಿಪ್ಪಾಡಿಯಲ್ಲಿ ನಡೆದಿದೆ.

ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಜೆಸಿಬಿ ಮಸೀದಿಯ ಮೇಲ್ಭಾಗದ ಮಿನಾರ ತೆರವುಗೊಳಿಸುತ್ತಿದ್ದ ಸಂದರ್ಭ ನೇರವಾಗಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ರಭಸಕ್ಕೆ ತಂತಿಗಳು ಸ್ಪರ್ಶಿಸಿ ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಹತ್ತಿರದ ಹತ್ತಾರು ಕಂಬಗಳು ನೆಲಕ್ಕೆ ಉರುಳಿವೆ. ರಸ್ತೆಯಲ್ಲಿ ಓಡಾಡುತ್ತಿದ್ದ ಹತ್ತಾರು ವಾಹನಗಳ ಮಧ್ಯೆ ವಿದ್ಯುತ್ ಕಂಬಗಳು ಜಖಂ ಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ

- Advertisement -

Latest News

error: Content is protected !!