Saturday, June 6, 2026
Homeಕರಾವಳಿಕಾಸರಗೋಡು ಕನ್ನಡ ಶಾಲೆಗಳಿಗೆ ಮಲೆಯಾಳಂ ಶಿಕ್ಷಕರ ನೇಮಕ : ಕೇರಳ ಸರ್ಕಾರಕ್ಕೆ ಒತ್ತಡ ಹೇರಲು ವಿಧಾನ...

ಕಾಸರಗೋಡು ಕನ್ನಡ ಶಾಲೆಗಳಿಗೆ ಮಲೆಯಾಳಂ ಶಿಕ್ಷಕರ ನೇಮಕ : ಕೇರಳ ಸರ್ಕಾರಕ್ಕೆ ಒತ್ತಡ ಹೇರಲು ವಿಧಾನ ಪರಿಷತ್‌ ನಲ್ಲಿ ಪ್ರಸ್ತಾಪ

- Advertisement -
- Advertisement -

ಬೆಂಗಳೂರು: ಕಾಸರಗೋಡಿನಲ್ಲಿ ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಕ ವಿಚಾರ ವಿಧಾನ ಪರಿಷತ್ ನಲ್ಲಿ ಪ್ರಸ್ತಾಪವಾಗಿದೆ.

ಶೂನ್ಯ ವೇಳೆಯಲ್ಲಿ ಪ್ರಸ್ತಾಪ ಮಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಕನ್ನಡ ಶಿಕ್ಷಕರ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಆದೇಶವಿದ್ದರೂ ಅಲ್ಲಿ ಮಲಯಾಳಂ ಶಿಕ್ಷಕರ ನೇಮಕ ಮಾಡಲಾಗಿದೆ, ಮಕ್ಕಳ ಶಿಕ್ಷಣಕ್ಕೆ ಕನ್ನಡ ಶಿಕ್ಷಕರ ನೇಮಕ ಕ್ರಮ ತೆಗೆದುಕೊಳ್ಳಲು

ಗಡಿನಾಡ ಭಾಗದ ವಿಧ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಕೇರಳ ಸರ್ಕಾರಕ್ಕೆ ಒತ್ತಡ ಹೇರುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ಕೇರಳ ಸಿಎಂ ಜೊತೆ ಮಾತನಾಡಲಾಗುವುದು, ಅಲ್ಲಿನ ಮಕ್ಕಳ ರಕ್ಷಣೆಗೆ ಸರ್ಕಾರ ಬದ್ದವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಭರವಸೆ ನೀಡಿದ್ದಾರೆ.‌

- Advertisement -

Latest News

error: Content is protected !!