Sunday, June 29, 2025
Homeತಾಜಾ ಸುದ್ದಿಆತಂಕಕಾರಿ ಸುದ್ದಿ: ಕೊರೋನಾ ರಾಜ್ಯಗಳ ಟಾಪ್ 10ರ ಪಟ್ಟಿಗೆ ಮರಳಿದ ಕರ್ನಾಟಕ

ಆತಂಕಕಾರಿ ಸುದ್ದಿ: ಕೊರೋನಾ ರಾಜ್ಯಗಳ ಟಾಪ್ 10ರ ಪಟ್ಟಿಗೆ ಮರಳಿದ ಕರ್ನಾಟಕ

spot_img
- Advertisement -
- Advertisement -

ಬೆಂಗಳೂರು: ದೇಶದಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿರುವ ಮೊದಲ ಹತ್ತು ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮತ್ತೆ ಸೇರಿಕೊಂಡಿದೆ. ಆರಂಭದ ದಿನಗಳಲ್ಲಿ ರಾಜ್ಯವು ಮೂರನೇ ಸ್ಥಾನದಲ್ಲಿತ್ತು. ನಂತರದ ದಿನಗಳಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸಿದ ಕಾರಣ, 14ನೇ ಸ್ಥಾನಕ್ಕೆ ಬಂದಿತ್ತು.

ಈಗ ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ 10ನೇ ಸ್ಥಾನಕ್ಕೆ ಬಂದಿದೆ. ಆದರೆ, ಕೋವಿಡ್‌ಗೆ ಒಳಗಾದವರಲ್ಲಿ ಮೃತಪಟ್ಟವರ ಪ್ರಮಾಣ ಕಡಿಮೆ ಇದೆ.

ಹಾಗೆಯೆ ಎಂದಿನಂತೆ ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ (1.28 ಲಕ್ಷ ಕೇಸ್), ನಂತರ ತಮಿಳುನಾಡು(56 ಸಾವಿರ), ದೆಹಲಿ (56 ಸಾವಿರ), ಗುಜರಾತ್(26), ಉತ್ತರ ಪ್ರದೇಶ (16), ರಾಜಸ್ಥಾನ(14), ಪಶ್ಚಿಮ ಬಂಗಾಳ(13), ಮಧ್ಯಪ್ರದೇಶ(11), ಹರಿಯಾಣ(10) ಮತ್ತು ಹತ್ತನೇ ಸ್ಥಾನದಲ್ಲಿ ಕರ್ನಾಟಕ (8.6 ಸಾವಿರ ಕೇಸ್) ರಾಜ್ಯವಿದೆ.

- Advertisement -
spot_img

Latest News

error: Content is protected !!