- Advertisement -
- Advertisement -
ಬೆಂಗಳೂರು : ಭಾರತದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಆದರೆ ಭಾರತದ ಕೊರೊನಾ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದ ಕರ್ನಾಟಕ ಇದೀಗ 13 ನೇ ಸ್ಥಾನಕ್ಕಿಳಿದಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್, ಕೊರೊನಾ ವೈರಸ್ ಪತ್ತೆಹಚ್ಚುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆಯು ಅಧಿಕಾರಿಗಳ ನಿಖರವಾದ ಯೋಜನೆ ಮತ್ತು ಸಾವಿರಾರು ವೈದ್ಯಕೀಯ ವೃತ್ತಿಪರರ ಕಠಿಣ ಪರಿಶ್ರಮದೊಂದಿಗೆ ಕರ್ನಾಟಕದಲ್ಲಿ ಕೋವಿಡ್ -19 ಅನ್ನು ನಿಯಂತ್ರಣದಲ್ಲಿಡಲು ಸಹಾಯವಾಗಿದೆ. ಹೀಗಾಗಿ ಭಾರತದ ಕೊರೊನಾ ಪಟ್ಟಿಯಲ್ಲಿ ನಾವು 13 ನೇ ಸ್ಥಾನಕ್ಕಿಳಿದಿದ್ದೇವೆ ಎಂದು ಹೇಳಿದ್ದಾರೆ.
- Advertisement -