Thursday, June 26, 2025
Homeಮನರಂಜನೆಕನ್ನಡಿಗರನ್ನು ಅವಮಾನಿಸಿದ ಸೋನು ನಿಗಂಗೆ ಭರ್ಜರಿ ಶಾಕ್ ಕೊಟ್ಟ ಕರ್ನಾಟಕ ಫಿಲ್ಮ್ ಚೇಂಬರ್

ಕನ್ನಡಿಗರನ್ನು ಅವಮಾನಿಸಿದ ಸೋನು ನಿಗಂಗೆ ಭರ್ಜರಿ ಶಾಕ್ ಕೊಟ್ಟ ಕರ್ನಾಟಕ ಫಿಲ್ಮ್ ಚೇಂಬರ್

spot_img
- Advertisement -
- Advertisement -

ಬೆಂಗಳೂರು; ಕನ್ನಡಿಗರನ್ನು ಅವಮಾನಿಸಿದ ಸೋನು ನಿಗಂಗೆ ಕರ್ನಾಟಕ ಫಿಲ್ಮ್ ಚೇಂಬರ್ ಭರ್ಜರಿ ಶಾಕ್ ಕೊಟ್ಟಿದೆ.

ಸೋನು ನಿಗಂರಿಂದ ಕನ್ನಡ ಹಾಡುಗಳನ್ನು ಹಾಡಿಸದಿರುವ ಕರ್ನಾಟಕ ಫಿಲ್ಮ್ ಚೇಂಬರ್ ನಿರ್ಧಾರ ಮಾಡಿದೆ. ಈ ಬಗ್ಗೆ ಮಾತನಾಡಿರೋ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು,  ಘಟನೆ ಬಳಿಕ ಈವರೆಗೂ ಸೋನು ನಿಗಮ್​ ಕನ್ನಡಿಗರ ಬಳಿ ಕ್ಷಮೆ‌ ಕೇಳಿಲ್ಲ. ಇನ್ನು ಮುಂದೆ ಸೋನು ನಿಗಮ್ ಅವರಿಂದ ಚಿತ್ರರಂಗದವರು ಮ್ಯೂಸಿಕಲ್ ನೈಟ್ಸ್ ಮಾಡುವುದಿಲ್ಲ. ಅವರ ಬಳಿ ಹಾಡನ್ನು ಹಾಡಿಸೋದಿಲ್ಲ. ಈ ಕ್ಷಣದಿಂದಲೇ ಸೋನುಗೆ ಅಸಹಕಾರ ತೋರಬೇಕೆಂದು ನಿರ್ಧಾರ ಮಾಡಲಾಗಿದೆ’ ಎಂದಿದ್ದಾರೆ.

ಮತ್ತೊಂದು ಕಡೆ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಆವಲಹಳ್ಳಿ ಠಾಣೆ ಪೊಲೀಸರಿಂದ ಸೋನು ನಿಗಮ್​ಗೆ ನೋಟಿಸ್​ ನೀಡಲಾಗಿದೆ. ಈ ಮೇಲ್ ಹಾಗೂ ಪೋಸ್ಟ್ ಮೂಲಕ ಸೋನುಗೆ ನೋಟಿಸ್ ಹೋಗಿದೆ. ನೋಟಿಸ್ ತಲುಪಿದ 1 ವಾರದೊಳಗಡೆ ವಿವರಣೆ ನೀಡಲು ಸೂಚನೆ ನೀಡಲಾಗಿದೆ.

- Advertisement -
spot_img

Latest News

error: Content is protected !!