Saturday, May 4, 2024
Homeತಾಜಾ ಸುದ್ದಿಮೂರು ತಿಂಗಳ ಅವಧಿಗೆ ಶಾಸಕಿಯಾದ ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ

ಮೂರು ತಿಂಗಳ ಅವಧಿಗೆ ಶಾಸಕಿಯಾದ ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ

spot_img
- Advertisement -
- Advertisement -

ಹೈದರಾಬಾದ್: ಕರ್ನಾಟಕ ಬಿಜೆಪಿ ಸಹ ಉಸ್ತುವಾರಿಯಾಗಿರುವ ಡಿ.ಕೆ. ಅರುಣಾ ಅವರಿಗೆ 3 ತಿಂಗಳ ಅವಧಿಗೆ ತೆಲಂಗಾಣ ರಾಜ್ಯದ ಶಾಸಕಿ ಸ್ಥಾನ ದೊರೆತಿದೆ.ತೆಲಂಗಾಣದ ಗದ್ವಾಲ್ ಕ್ಷೇತ್ರದ ಶಾಸಕಿಯಾಗಿ ಡಿ.ಕೆ. ಅರುಣಾ ಆಯ್ಕೆಯಾಗಿದ್ದಾರೆ.

ಗದ್ವಾಲ್ ಕ್ಷೇತ್ರದ ಬಿಆರ್ ಎಸ್ ಪಕ್ಷದ ಶಾಸಕರಾಗಿದ್ದ ಕೃಷ್ಣಾರೆಡ್ಡಿ ಚುನಾವಣೆ ವೇಳೆ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಕೃಷ್ಣಾ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ನಿನ್ನೆ ತೆಲಂಗಾಣ ಹೈಕೋರ್ಟ್ ವಜಾಗೊಳಿಸಿತ್ತು.

ಎರಡನೇ ಸ್ಥಾನದಲ್ಲಿದ್ದ ಡಿ.ಕೆ. ಅರುಣಾ ಅವರನ್ನು ಶಾಸಕರಾಗಿ ತೆಲಂಗಾಣ ಹೈಕೋರ್ಟ್ ಘೋಷಣೆ ಮಾಡಿದ್ದು ಮೂರು ತಿಂಗಳ ಅವಧಿಗೆ ಅರುಣಾ ಅವರಿಗೆ ಶಾಸಕಿ ಸ್ಥಾನ ದೊರೆತಿದೆ.ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ತೆಲಂಗಾಣ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

2018ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 28,445 ಮತಗಳಿಂದ ಸೋತಿದ್ದ ಅರುಣಾ, ಬಳಿಕ ಬಿಜೆಪಿ ಸೇರಿ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿ ಸೋತಿದ್ದರು.ಸದ್ಯ ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ ಅಗಿರುವ ಡಿ.ಕೆ. ಅರುಣಾ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆಯೂ ಆಗಿದ್ದಾರೆ.

- Advertisement -
spot_img

Latest News

error: Content is protected !!