Sunday, June 7, 2026
Homeಅಪರಾಧಕಾರ್ಕಳ : ಚಾಲಕನ ನಿರ್ಲಕ್ಷ್ಯ , ಬಸ್ಸಿನಿಂದ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

ಕಾರ್ಕಳ : ಚಾಲಕನ ನಿರ್ಲಕ್ಷ್ಯ , ಬಸ್ಸಿನಿಂದ ಬಿದ್ದು ವಿದ್ಯಾರ್ಥಿನಿಗೆ ಗಂಭೀರ ಗಾಯ

- Advertisement -
- Advertisement -

ಕಾರ್ಕಳ : ಕಾಲೇಜಿಗೆ ಹೋಗಿ ಮನೆಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಾಲಕನ ನಿರ್ಲಕ್ಷ್ಯದಿಂದಾಗಿ ಬಸ್ಸಿನಿಂದ ಡಾಂಬರು ರಸ್ತೆ ಬಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿರುವ ಘಟನೆ ತಾಲೂಕಿನ ಅಜೆಕಾರು ಕಾಡುಹೊಳೆ ಎಂಬಲ್ಲಿ ಸಂಭವಿಸಿದೆ. ಉಡುಪಿ ಖಾಸಗಿ ಕಾಲೇಜಿನ ಸಿ.ಎ ವಿದ್ಯಾರ್ಥಿನಿ ಅಭಿಜ್ಞಾ (18) ಘಟನೆಯಲ್ಲಿ ಗಾಯಗೊಂಡವಳು.

ವಿದ್ಯಾರ್ಥಿನಿ ಜನವರಿ 1ರ ಮಧ್ಯಾಹ್ನ 3.10ರ ವೇಳೆಗೆ ಅಜೆಕಾರು ಕಡೆಯಿಂದ ಲಕ್ಷ್ಮೀಶ ಬಸ್ಸಿನಲ್ಲಿ ಕಾಡುಹೊಳೆ ಜಂಕ್ಷನ್ ಕಡೆಗೆ ಬಂದಿದ್ದಳು. ನಿಂತಿದ್ದ ಬಸ್ಸಿನ ಮುಂದಿನ ಬಾಗಿಲಿನಿಂದ ಅಭಿಜ್ಞಾಳು ಇಳಿಯುತ್ತಿದ್ದಾಗ ಬಸ್ಸಿನ ಚಾಲಕನು ಏಕಾಏಕಿಯಾಗಿ ಬಸ್ಸನ್ನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿರುವುದು ಘಟನೆಗೆ ಕಾರಣವಾಗಿದೆ. ಅಭಿಜ್ಞಾಳು ಬಿದ್ದ ಪರಿಣಾಮ ಅಭಿಜ್ಞಾಳಿಗೆ ತೀವ್ರತರದಲ್ಲಿ ಗಾಯಗಳಾಗಿವೆ. ಬಸ್ಸಿನ ಡ್ರೈವರ್, ಕಂಡಕ್ಟರ್ ಹಾಗೂ ಸಾರ್ವಜನಿಕರ ಸಹಾಯದಿಂದ ಆಕೆಯನ್ನು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ಸು ಚಾಲಕ ಶ್ರೀಕಾಂತ್ ವಿರುದ್ಧ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!