Friday, June 5, 2026
Homeಕರಾವಳಿಬೆಳ್ತಂಗಡಿ: ದಕ್ಷಿಣ ಭಾರತ ಕರಾಟೆ ಸ್ಪರ್ಧೆಯಲ್ಲಿ ದಕ್ಷಿಣಕನ್ನಡದ ಸಿಂಚನಾ ಎಂ.ಡಿ ಪ್ರಥಮ ಸ್ಥಾನ: ರಾಷ್ಟ್ರ ಮಟ್ಟಕ್ಕೆ...

ಬೆಳ್ತಂಗಡಿ: ದಕ್ಷಿಣ ಭಾರತ ಕರಾಟೆ ಸ್ಪರ್ಧೆಯಲ್ಲಿ ದಕ್ಷಿಣಕನ್ನಡದ ಸಿಂಚನಾ ಎಂ.ಡಿ ಪ್ರಥಮ ಸ್ಥಾನ: ರಾಷ್ಟ್ರ ಮಟ್ಟಕ್ಕೆ ಆಯ್ಕೆ

- Advertisement -
- Advertisement -

ಬೆಳ್ತಂಗಡಿ: 2022 ಮಾರ್ಚ್ 05 ಹಾಗೂ 06 ರಂದು ತೆಲಂಗಾಣದ ಹೈದರಾಬಾದ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಸಿಂಚನಾ ಎಂ.ಡಿ -61 ಕೆ.ಜಿ ವಿಭಾಗ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಇವರು ಕರಾವಳಿ ಕಾವಲು ಪೊಲೀಸ್ ಠಾಣೆ ಮಂಗಳೂರು ಇಲ್ಲಿನ ಹೆಡ್ ಕಾನ್ಸ್‌ಟೇಬಲ್ ದುರ್ಗಾದಾಸ್ ಮತ್ತು ಶ್ರೀಮತಿ ರೇವತಿ ಇವರ ಪುತ್ರಿಯಾಗಿದ್ದು, ಬೆಳ್ತಂಗಡಿ YSK ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಮತ್ತು ಕೋಚ್ ಮಿಥುನ್ ರಾಜ್ ರವರಿಂದ ತರಬೇತಿ ಪಡೆಯುತ್ತಿದ್ದಾರೆ.

ಇವರು ಸೈಂಟ್ ಮೇರಿಸ್ ಲೈಲಾ ಹಾಗೂ ಬೆಳ್ತಂಗಡಿ ವಾಣಿ ಕಾಲೇಜಿನ ಹಳೇಯ ವಿದ್ಯಾರ್ಥಿನಿ. ಪ್ರಸ್ತುತ ಸರ್ಕಾರಿ ಮಹಿಳಾ ವಿದ್ಯಾರ್ಥಿ ನಿಲಯ ಕರಾಟೆ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ.

- Advertisement -

Latest News

error: Content is protected !!