Wednesday, June 3, 2026
Homeಕರಾವಳಿಬೆಳ್ತಂಗಡಿ : ದೀಕ್ಷಿತಾ.ಕೆ ಅವರಿಗೆ ಕರಾಟೆ ರಾಜ್ಯ ಮಟ್ಟದ ಕೊಡಗು ಕಪ್...

ಬೆಳ್ತಂಗಡಿ : ದೀಕ್ಷಿತಾ.ಕೆ ಅವರಿಗೆ ಕರಾಟೆ ರಾಜ್ಯ ಮಟ್ಟದ ಕೊಡಗು ಕಪ್ ಪ್ರಶಸ್ತಿ

- Advertisement -
- Advertisement -

ಬೆಳ್ತಂಗಡಿ : ಅಕ್ಟೋಬರ್ 9 ರಂದು ಕುಶಾಲನಗರದ ರೈತ ಸಭಾ ಭವನದಲ್ಲಿ ಕಲಾಭೂಮಿ ಮಾರ್ಷಲ್ ಆರ್ಟ್ಸ್ ಆಯೋಜಿಸಿದ ರಾಜ್ಯ ಮಟ್ಟದ ಕರಾಟೆ ಕೊಡಗು ಕಪ್ ನಲ್ಲಿ ಬೆಳ್ತಂಗಡಿ YSK ಕರಾಟೆ ಗುರುಗಳಾದ ಅಶೋಕ್ ಆಚಾರ್ಯ ಇವರ ಶಿಷ್ಯೆ ದೀಕ್ಷಿತಾ.ಕೆ ಇವರು 10 ವರ್ಷದೊಳಗಿನ ವಿಭಾಗದ ಕಟಾದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿದ್ದು ಒಂದು ಪ್ರಥಮ ಹಾಗೂ ಒಂದು ತೃತೀಯ ಶ್ರೇಣಿಯ ಟ್ರೋಫಿ ಯನ್ನು ಪಡೆದುಕೊಂಡಿರುತ್ತಾರೆ.

ಇವರು ಬೆಳ್ತಂಗಡಿ ಪೋಲಿಸ್ ಹೆಡ್ ಕಾನ್ಸ್ಟೆಬಲ್ ಕನಕರಾಜ್.ಆರ್ ಹಾಗೂ ಸುಮತಿ. ಕೆ ದಂಪತಿಗಳ ಪುತ್ರಿಯಾಗಿದ್ದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ CBSE ಆಂಗ್ಲ ಮಾದ್ಯಮ ಶಾಲೆಯ 4 ನೇ ತರಗತಿಯ B ವಿಭಾಗದ ವಿದ್ಯಾರ್ಥಿಯಾಗಿರುತ್ತಾರೆ.

- Advertisement -

Latest News

error: Content is protected !!