Thursday, June 4, 2026
Homeಕರಾವಳಿಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗ್‌ಝಿನ್‍ನಲ್ಲಿ ಕಾಂತಾರ ಪೋಸ್ಟರ್‌

ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗ್‌ಝಿನ್‍ನಲ್ಲಿ ಕಾಂತಾರ ಪೋಸ್ಟರ್‌

- Advertisement -
- Advertisement -

ಸ್ಯಾಂಡಲ್‌ವುಡ್‌ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದ ಕಾಂತಾರ ಅಬ್ಬರ ಮುಂದುವರೆಯುತ್ತಲೇ ಇದೆ. ಇದೀಗ ಅಂತಾರಾಷ್ಟ್ರೀಯ ಪ್ರತಿಷ್ಠಿತ ಫ್ರಂಟ್‍ಲೈನ್ ಮ್ಯಾಗಝಿನ್‍ನಲ್ಲಿ ಕಾಂತಾರದ ಸ್ಟಿಲ್ ಅನ್ನು ಕವರ್ ಪೇಜ್‍ನಲ್ಲಿ ಬಳಸಲಾಗಿದೆ. ಫೋಟೋ ಜೊತೆಗೆ ‘ಅದ್ಭುತ ಕಾಂತಾರ’ ಎಂಬ ಶೀರ್ಷಿಕೆಯಡಿ ಮುಖಪುಟದಲ್ಲಿ ಕಾಂತಾರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. 1984ರಿಂದ ಈವರೆಗೆ ಯಾವುದೇ ಕನ್ನಡ ಚಿತ್ರದ ಫೋಟೋಗಳು ಫ್ರಂಟ್‍ಲೈನ್ ಮ್ಯಾಗಜಿನ್‍ನ ಮುಖಪುಟದಲ್ಲಿ ಬಂದಿರಲಿಲ್ಲ ಎನ್ನುವುದು ವಿಶೇಷ.

ಇನ್ನು ಕನ್ನಡ, ಹಿಂದಿ, ತಮಿಳು ಹಾಗೂ ತೆಲುಗಿನ ನಂತರ ಮಲಯಾಳಂನಲ್ಲೂ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿಯೂ ಉತ್ತಮ ಗಳಿಕೆ ಮಾಡಿದೆ. ಈವರೆಗೂ ಕೆಜಿಎಫ್ 1 ಸಿನಿಮಾ ಮಾಡಿದ ಗಳಿಕೆಗಿಂತಲೂ ಕಾಂತರ ಕಲೆಕ್ಷನ್ ಹೆಚ್ಚು ಎನ್ನುವುದು ಸದ್ಯದ ಮಾಹಿತಿ. 

- Advertisement -

Latest News

error: Content is protected !!