Saturday, June 6, 2026
Homeತಾಜಾ ಸುದ್ದಿʻಕಾಂತಾರ’ ನಾವೆಲ್ಲಾ ಹೆಮ್ಮೆಪಡಬೇಕಾದಂತಹ ಸಿನಿಮಾ: ನಟ ಚೇತನ್‌ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು: ಮುತಾಲಿಕ್‌

ʻಕಾಂತಾರ’ ನಾವೆಲ್ಲಾ ಹೆಮ್ಮೆಪಡಬೇಕಾದಂತಹ ಸಿನಿಮಾ: ನಟ ಚೇತನ್‌ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು: ಮುತಾಲಿಕ್‌

- Advertisement -
- Advertisement -

ಹಾವೇರಿ: ಕಾಂತಾರ ನಾವೆಲ್ಲಾ ಹೆಮ್ಮೆಪಡಬೇಕಾದಂತಹ ಸಿನಿಮಾ. ಹೀಗಿರುವಾಗ ಒಬ್ಬ ದುಷ್ಟ, ನೀಚ, ಒಬ್ಬ ನಾಸ್ತಿಕವಾದಿ ಚೇತನ್ ಕಲ್ಲು ಹಾಕೋ ಪ್ರಯತ್ನ ಮಾಡಿದ್ದು ಖಂಡನೀಯ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಆಕ್ರೋಶ ಹೊರ ಹಾಕಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂತಾರ ಚಿತ್ರ ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಹೀಗಿರುವಾಗ ನಟ ಚೇತನ್ ನಮ್ಮ ಹಿಂದೂ ಸಮಾಜ ಒಡೆಯೋ ಪ್ರಕ್ರಿಯೆ ಮಾಡ್ತಿರೋದು ಸರಿಯಲ್ಲ. ಚೇತನ್ ಅವರೆ ನೀವು ಒಳ್ಳೆಯ ನಟರಾಗಿರಬೇಕೇ ವಿನಃ ಹಿಂದೂ ವಿರೋಧಿ, ದೇಶದ್ರೋಹಿ ಅಥವಾ ಸಮಾಜ ಕಂಟಕದ ಕೆಲಸವನ್ನು ನಿಮ್ಮಿಂದ ಆಪೇಕ್ಷಿಸಿರಲಿಲ್ಲ. ನಿಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಮುತಾಲಿಕ್‌ ಆಗ್ರಹಿಸಿದ್ರು.

- Advertisement -

Latest News

error: Content is protected !!