Monday, May 13, 2024
Homeತಾಜಾ ಸುದ್ದಿಎಸ್ ಸಿ-ಎಸ್ ಟಿ ಸಮುದಾಯಕ್ಕಾಗಿ ರಾಜ್ಯ ಸರ್ಕಾರದಿಂದ ಕಲ್ಯಾಣ ಮಿತ್ರ ಸಹಾಯವಾಣಿ ಲೋಕಾರ್ಪಣೆ

ಎಸ್ ಸಿ-ಎಸ್ ಟಿ ಸಮುದಾಯಕ್ಕಾಗಿ ರಾಜ್ಯ ಸರ್ಕಾರದಿಂದ ಕಲ್ಯಾಣ ಮಿತ್ರ ಸಹಾಯವಾಣಿ ಲೋಕಾರ್ಪಣೆ

spot_img
- Advertisement -
- Advertisement -

ಬೆಂಗಳೂರು: ರಾಜ್ಯ ಸರ್ಕಾರದಿಂದ ಕಲ್ಯಾಣ ಮಿತ್ರ ಸಹಾಯವಾಣಿ ಲೋಕಾರ್ಪಣೆಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರಿನಲ್ಲಿ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಸಹಾಯವಾಣಿ ಲೋಕಾರ್ಪಣೆ ಮಾಡಿದ್ದಾರೆ‌.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ
ಇಲಾಖೆಗಳನ್ನು ಒಳಗೊಂಡ ಸಹಾಯವಾಣಿ ಇದಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಎಲ್ಲಾ ನಿಗಮ-ಮಂಡಳಿಗಳ ಮಾಹಿತಿ ಲಭ್ಯವಾಗಲಿದೆ.

ಇಲಾಖೆಯ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಪಡೆಯಬಹುದಲ್ಲದೇ, ಇಲಾಖೆಯ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಬಗ್ಗೆ ಕೂಡಾ ಮಾಹಿತಿ ಪಡೆಯಬಹುದು.

ಇಲಾಖೆಯ ವಿವಿಧ ಸೌಲಭ್ಯಗಳನ್ನು ಪಡೆಯುವ ರೀತಿ ಬಗ್ಗೆ ಮಾಹಿತಿ ನೀಡಲಿರುವ ಸಹಾಯವಾಣಿ, ಇಲಾಖೆಯ ಯಾವುದೇ ಸಮಸ್ಯೆಗಳಿಗೆ ಸಹಾಯವಾಣಿಗೆ ಕರೆ ಮಾಡಿ ಸಾರ್ವಜನಿಕರು ಪರಿಹಾರ ಪಡೆದುಕೊಳ್ಳಬಹುದು.

ಸಹಾಯವಾಣಿ ಮೊಬೈಲ್ ದೂರವಾಣಿ ಸಂಖ್ಯೆ-
9482300400, ಲ್ಯಾಂಡ್ ಲೈನ್- 080-22634300, ಟ್ವಿಟರ್- @SWDGok, ಫೇಸ್ ಬುಕ್- @socialWelfareDeprtment ಮತ್ತು ವಾಟ್ಸ್ ಆಪ್ – 9482300400

ವಾರದ ಏಳೂ ದಿನಗಳು ಕೂಡಾ 24 ಗಂಟೆಗಳ ಕಾಲ ಕಲ್ಯಾಣ ಮಿತ್ರ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.

- Advertisement -
spot_img

Latest News

error: Content is protected !!