Thursday, March 28, 2024
Homeಅಪರಾಧಬೆಳ್ತಂಗಡಿ : ಕಲ್ಮಂಜ ವಿದ್ಯುತ್ ತಂತಿ ಸ್ಪರ್ಶಿಸಿ ಉದಯ ಗೌಡ ಸಾವು ಪ್ರಕರಣ, ಮೂವರ ಬಂಧನ

ಬೆಳ್ತಂಗಡಿ : ಕಲ್ಮಂಜ ವಿದ್ಯುತ್ ತಂತಿ ಸ್ಪರ್ಶಿಸಿ ಉದಯ ಗೌಡ ಸಾವು ಪ್ರಕರಣ, ಮೂವರ ಬಂಧನ

spot_img
- Advertisement -
- Advertisement -

ಬೆಳ್ತಂಗಡಿ : ಮನೆಯಿಂದ ತೋಟಕ್ಕೆ ಹೋಗಿದ್ದ ಕಲ್ಮಂಜ ಗ್ರಾಮದ ಕರಿಯನೆಲ ಕಂರ್ಬಿತ್ತಿಲ್ ನಿವಾಸಿ ಉದಯ ಗೌಡ ಅವರು ವಿದ್ಯುತ್ ಅವಘಡದಿಂದ ಸಾವನ್ನಪ್ಪಿರುವ ಕಾರಣದಿಂದ ಇದೀಗ ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನಿಲ ನಿವಾಸಿ ಹರೀಶ್ ಗೌಡ(59) , ಕರಿಯನಿಲ ನಿವಾಸಿ ಸುಮಂತ್ (21) ,ಕರಿಯನಿಲ ನಿವಾಸಿ ಪ್ರಶಾಂತ್ (30) ರನ್ನು ಇಂದು ಸಂಜೆ ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ಎಂಜಿರ ಪ್ರದೇಶದಲ್ಲಿ ಧರ್ಮಸ್ಥಳ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕರಿಯನೆಲದ ಕರ್ಬಿತ್ತಿಲ್ ನಿವಾಸಿ ಶೀನಪ್ಪ ಗೌಡ ಎಂಬವರ ಪುತ್ರ ಉದಯ ಗೌಡ(43) ಅವರು ತೋಟಕ್ಕೆ ಹೋಗುವ ದಾರಿ ಮಧ್ಯೆ ಶಿವಪ್ಪ ಗೌಡ ಎಂಬವರ ಪಾಳುಬಿದ್ದ ಗದ್ದೆಯಲ್ಲಿ ಅಸಹಜವಾಗಿ ಮೃತಪಟ್ಟಿದ್ದರು. ಈ ಬಗ್ಗೆ ಮೃತರ ಸಹೋದರ ಯೋಗೀಶ ಕೆ ಧರ್ಮಸ್ಥಳ ಪೊಲೀಸರಿಗೆ ನೀಡಿದ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಕಲಂ: 304 (A), 139 ಎಲೆಕ್ಟ್ರಿಸಿಟಿ ಆ್ಯಕ್ಟ್ 2003 ,ಜೊತೆಗೆ 34 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿತ್ತು.

ಘಟನೆ ವಿವರ: ಮೃತ ಉದಯ ಗೌಡ ಅವರ ಸಹೋದರ ಯೋಗೀಶ ಅವರು ನೀಡಿದ ದೂರಿನ ಸಾರಾಂಶದಲ್ಲಿ, ಅ.29 ರಂದು ರಾತ್ರಿ 9.30 ಕ್ಕೆ ರಬ್ಬರ್ ಟ್ಯಾಪಿಂಗ್ ಗೆಂದು ಮನೆಯಿಂದ ಹೊರ ಹೋಗಿದ್ದ ನಾನು, 2 ಗಂಟೆಗೆ ಮರಳಿ ಬಂದಿದ್ದೆ. ಬೆಳಿಗ್ಗೆ 7 ಗಂಟೆಗೆ ಮತ್ತೆ ರಬ್ಬರ್ ಹಾಲು ಸಂಗ್ರಹಕ್ಕೆಂದು ಮನೆಯಿಂದ ತೆರಳುವ ವೇಳೆ ಅಣ್ಣ ಉದಯ ಗೌಡ ಮನೆಯಲ್ಲಿರಲಿಲ್ಲ. ಅವರು ಎಂದಿನಂತೆ ತೋಟದ ಕಡೆಗೆ ಹೋಗಿರಬಹುದು ಎಂದುಕೊಂಡಿದ್ದೆವು. ತೋಟದಲ್ಲಿದ್ದ ವೇಳೆ ನನಗೆ ನನ್ನ ಪತ್ನಿ ಕರೆಮಾಡಿ, ಅಣ್ಣ ಉದಯ ಗೌಡ ಇನ್ನೂ ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು.

ಆದ್ದರಿಂದ ನಾನು ಮಧ್ಯಾಹ್ನ 12 ಗಂಟೆಗೆ ಮನೆಗೆ ವಾಪಾಸು ಬಂದು ಮನೆಯ ಆಸುಪಾಸಿನ ಸಂಬಂಧಿಗಳ ಮನೆಗೆ ಕರೆ ಮಾಡಿ ವಿಚಾರ ತಿಳಿಸಿದ್ದೆ. ಇದಾಗಿ ಹುಡುಕುವ ಯತ್ನದಲ್ಲಿರುವಂತೆ ಸಂಬಂಧಿ ಅಶೋಕ ಎಂಬವರು ಕರೆ ಮಾಡಿ, ಉದಯ ಗೌಡ ಅವರ ದೇಹ ಶಿವಪ್ಪ ಗೌಡ ಅವರ ಪಾಳುಬಿದ್ದ ಗದ್ದೆಯಲ್ಲಿ ಕವುಚಿ ಮಲಗಿದ ಸ್ಥಿತಿಯಲ್ಲಿರುವುದಾಗಿ ಮಾಹಿತಿ ನೀಡಿದರು. ನಾವೆಲ್ಲ ಅಲ್ಲಿಗೆ ಓಡಿಹೋಗಿ ನೋಡಿ ಉಪಚರಿಸಲಾಗಿ ಎರಡೂ ಕಾಲುಗಳಲ್ಲಿ ವಿದ್ಯುತ್ ಅವಘಡದಂತಹ ಕುರುಹು ಕಂಡು ಬಂದಿತ್ತು. ಇದು ವಿದ್ಯುತ್ ವಯರ್ ತಾಗಿಯೇ ಘಟನೆ ನಡೆದಿದೆ ಎಂದು ತಿಳಿಸಿದ್ದರು.

ಧರ್ಮಸ್ಥಳ ಎಸ್‌.ಐ ಅನಿಲ್ ಕುಮಾರ್ ತಂಡ ತನಿಖೆ ನಡೆಸಿದಾಗ ಕೃಷಿ ರಕ್ಷಣೆ ಅಥವಾ ಕಾಡುಪ್ರಾಣಿ ಭೇಟೆಗಾಗಿ ಹರೀಶ ಗೌಡ ಅವರ ಪಂಪು ಶೆಡ್ಡ್‌ನಿಂದ ಅಕ್ರಮವಾಗಿ ವಿದ್ಯುತ್ ಬಳಸಿ ಅದನ್ನು ವಯರ್ ಗೆ ಜೋಡಿಸಿಟ್ಟಿದ್ದು, ಅದನ್ನು ತೋಟಕ್ಕೆ ಹೋಗುವ ದಾರಿಮಧ್ಯೆ ಉದಯ ಗೌಡನು ಸ್ಪರ್ಶಿಸಿದ ಪರಿಣಾಮ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ.

- Advertisement -
spot_img

Latest News

error: Content is protected !!