Monday, May 6, 2024
Homeಕರಾವಳಿಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವ

ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವ

spot_img
- Advertisement -
- Advertisement -

ಬೆಳ್ತಂಗಡಿ: ಸವಣಾಲು ಗ್ರಾಮದ ಕಾಳಿಬೆಟ್ಟ ಶ್ರೀ ದುರ್ಗಾಕಾಳಿಕಾಂಬ ಕ್ಷೇತ್ರದಲ್ಲಿ ಫೆ. 22 ಗುರುವಾರದಿಂದ ಫೆ.24 ಶನಿವಾರದವರೆಗೆ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ.

ಜಾತ್ರೆಯಲ್ಲಿ ವೈದಿಕ ಕಾರ್ಯಕ್ರಮಗಳು ವಿಧಿವತ್ತಾಗಿ ಜರಗಲಿರುವುದು ಹಾಗೂ ಅನ್ನಸಂತರ್ಪಣೆ ಕೂಡ ಜರಗಲಿರುವುದು. ಫೆ.22 ಗುರುವಾರದಂದು ಸಂಜೆ 06:00 ಗಂಟೆಯಿಂದ ಅಂಗನವಾಡಿ ಕೇಂದ್ರ, ಗುತ್ತಿನಬೈಲು & ನಡ್ತಿಕಲ್ಲು ಇಲ್ಲಿನ ಪುಟಾಣಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದ ಗೋಕುಲ ಇವರಿಂದ ಕು. ಶ್ವೇತಾ ಅರೆಹೊಳೆ ನಿರ್ದೇಶನದ ನೃತ್ಯ ವೈಭವ ನಡೆಯಲಿದೆ.

ಫೆ. 23 ಶುಕ್ರವಾರದಂದು ರಾತ್ರಿ 09:30ರಿಂದ ಸಂಗಮ ಕಲಾವಿದರು, ಉಜಿರೆ ಇವರಿಂದ ನನ ಮರ್ಲ್ ಕಟ್ಟೊಡ್ಚಿ ನಾಟಕ ಪ್ರದರ್ಶನವಾಗಲಿದೆ ಎಂದು ಪ್ರಕಟಣೆಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.

ಭಕ್ತ ಜನರ ಅವಗಾಹನೆಗೆ; ದಿ. 22/02/2024 ಗುರುವಾರ ದಂದು ಬೆಳಗ್ಗೆ 09:00 ಗಂಟೆ ಯಿಂದ ಹಸಿರುವಾಣಿ ಹೊರೆಕಾಣಿಕೆ ಯನ್ನು ಸ್ವೀಕರಿಸಲಾಗುವುದು. ಹೆಚ್ಚಿನ ವಿವರಗಳಿಗೆ ಶ್ರೀ ಕ್ಷೇತ್ರದ ಕಛೇರಿಯನ್ನು ಸಂಪರ್ಕಿಸಬಹುದು. ಕಾರ್ಯಕ್ರಮಗಳು ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿದೆ.

- Advertisement -
spot_img

Latest News

error: Content is protected !!