Friday, June 26, 2026
Homeಕರಾವಳಿಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ: ಯುವಶಕ್ತಿ ಕಡೇಶಿವಾಲಯ ವತಿಯಿಂದ ಆನ್ಲೈನ್ ಮುದ್ದುಕೃಷ್ಣವೇಷ ಸ್ಪರ್ಧೆ

ಶ್ರೀಕೃಷ್ಣ ಜನ್ಮಾಷ್ಟಮಿ ವಿಶೇಷ: ಯುವಶಕ್ತಿ ಕಡೇಶಿವಾಲಯ ವತಿಯಿಂದ ಆನ್ಲೈನ್ ಮುದ್ದುಕೃಷ್ಣವೇಷ ಸ್ಪರ್ಧೆ

- Advertisement -
- Advertisement -

ಬಂಟ್ವಾಳ: ದೇಶದೆಲ್ಲೆಡೆ ಕೊರೋನಾ ತಂಡವಾಡುತ್ತಿದ್ದು, ಇದರಿಂದಾಗಿ ವಿಜೃಂಭಣೆಯ ಹಬ್ಬಗಳಿಗೆ ಸದ್ಯಕ್ಕಂತೂ ಬ್ರೇಕ್ ಬಿದ್ದಂತಾಗಿದೆ. ಹಾಗೆಯೆ ಜಗದ್ದೋರಾಕ ಶ್ರೀಕೃಷ್ಣನ ಅಷ್ಟಮಿಗೆ ಕ್ಷಣಗಣನೆ ಆರಂಭವಾಗಿದೆ.

ಈ ನಿಟ್ಟಿನಲ್ಲಿ ಕೊರೋನಾ ಮಾರ್ಗಸೂಚಿ ಉಲ್ಲಂಘನೆಯಾಗದೆ ಹಾಗೆಯೇ ಕೃಷ್ಣಾಷ್ಟಮಿಯಂದು ಎಲ್ಲರ ಮನಸ್ಸಿಗೆ ಮುದ ನೀಡುವ ಮಕ್ಕಳ ಮುದ್ದುಕೃಷ್ಣ ಸ್ಪರ್ಧೆಯನ್ನು ಆನ್ಲೈನ್ ಮುಖಾಂತರ ನಡೆಸಲು ತಾಲೂಕಿನ ಉತ್ಸಾಹಿ ಯುವಕರೇ ಕಟ್ಟಿರುವ “ಯುವಶಕ್ತಿ ಕಡೇಶಿವಾಲಯ(ರಿ) ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿ ಅಮೈ” ತೀರ್ಮಾನಿಸಿದೆ.

ಯಾರು ಈ ಆನ್ಲೈನ್ ಸ್ಪರ್ಧೆಯಲ್ಲಿ ಭಾಗವಿಹಿಸಬಹುದು ?
ದೇಶದ ಯಾವುದೇ ಭಾಗದ 7 ವರ್ಷದ ಒಳಗಿನ ಮಕ್ಕಳು ಈ ಆನ್ಲೈನ್ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಭಾಗವಿಹಿಸಲು ಅವಕಾಶವಿದ್ದು, ಮಕ್ಕಳ ಭಾವಚಿತ್ರವನ್ನು ಪೂರ್ಣ ವಿವರಗಳೊಂದಿಗೆ 9686749330 ಅಥವಾ 9483535309 ಸಂಖ್ಯೆ ಗೆ ವಾಟ್ಸಾಪ್ ಮುಖಾಂತರ ಕಳುಹಿಸಬೇಕು.

ಆಯ್ಕೆಯ ವಿಧಾನ ಹೇಗೆ?
ಬಂದಿರುವ ಪ್ರತಿ ಮಕ್ಕಳ ಭಾವಚಿತ್ರಗಳನ್ನು ಯುವಶಕ್ತಿ ಕಡೇಶಿವಾಲಯದ ಫೇಸ್ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುವುದು. ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ಸಂಘಟಕರು ಘೋಷಿಸಿದ್ದು, ಹಾಗೆಯೇ ಅತೀ ಹೆಚ್ಚು ಲೈಕ್ ಪಡೆದ ಚಿತ್ರಕ್ಕೆ ವಿಶೇಷ ಬಹುಮಾನವಿದೆ

ಈ ಸ್ಪರ್ಧೆಯು 16/08/2020 ರ ಮದ್ಯರಾತ್ರಿಯವರೆಗೆ ನಡೆಯಲಿದೆ.ಆಗಸ್ಟ್ 20 ರಂದು ಫಲಿತಾಂಶ ಹೊರಬೀಳಲಿದೆ

- Advertisement -

Latest News

error: Content is protected !!