Tuesday, June 23, 2026
Homeಕರಾವಳಿಮಂಗಳೂರುಕಡಬ : ಯೂಟ್ಯೂಬರ್ ಸಂತೋಷ್ ಕಡಬ ಪೊಲೀಸ್ ವಶಕ್ಕೆ

ಕಡಬ : ಯೂಟ್ಯೂಬರ್ ಸಂತೋಷ್ ಕಡಬ ಪೊಲೀಸ್ ವಶಕ್ಕೆ

- Advertisement -
- Advertisement -

 ಕಡಬ : ಕೋರ್ಟ್ ಆದೇಶ ಉಲ್ಲಂಘನೆ ಪ್ರಕರಣ ಸಂಬಂಧ 30 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿದ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಸಂಚಾರಿ ಸ್ಟುಡಿಯೋ ಯೂಟ್ಯೂಬರ್ ಸಂತೋಷ್ ಕಡಬ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಪದೆ ಪದೆ ಸಂಚಾರಿ ಸ್ಟುಡಿಯೋ ಯೂಟ್ಯೂಬ್ ಮೂಲಕ ಅವಹೇಳನಕಾರಿಯಾಗಿ ವಿಡಿಯೋ ಮಾಡಿ ಪ್ರಸಾರ ಮಾಡಿದ ಪ್ರಕರಣ ಸಂಬಂಧ ನೋಟಿಸ್ ಜಾರಿಯಾಗಿದ್ದರು ಕೂಡ ಮತ್ತೆ ವಿಡಿಯೋ ಪ್ರಸಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 30 ದಿನಗಳ ಕಾಲ ಜೈಲು ಶಿಕ್ಷೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೋರ್ಟ್ ಸಿಬ್ಬಂದಿ ಜೊತೆಯಲ್ಲಿ ಬೆಂಗಳೂರು ಪೊಲೀಸರು ಫೆ‌.18 ರಂದು ಕಡಬಕ್ಕೆ ಆಗಮಿಸಿ ಸಂತೋಷ್ ನನ್ನು ಆತನ ಶಾಪ್ ನಿಂದ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

ಸಂಜೆ ವೇಳೆಗೆ ಬೆಂಗಳೂರು ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿ 30 ದಿನಗಳ ಕಾಲ ಜೈಲಿಗೆ ಕಳುಹಿಸಲಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ವಕೀಲರಾದ ರಾಜಶೇಖರ್ ಹಿಲಿಯಾರು ವಾದ ಮಂಡಿಸಿದ್ದರು.

- Advertisement -

Latest News

error: Content is protected !!