Wednesday, June 24, 2026
Homeಕರಾವಳಿಕಡಬ;  ಚಲಿಸುತ್ತಿದ್ದ  ಕಾರಿನ ಡೋರ್ ಹಾಗೂ ಕಾರಿನ ಮೇಲೆ ಕುಳಿತು ಯುವಕರ ಪುಂಡಾಟ

ಕಡಬ;  ಚಲಿಸುತ್ತಿದ್ದ  ಕಾರಿನ ಡೋರ್ ಹಾಗೂ ಕಾರಿನ ಮೇಲೆ ಕುಳಿತು ಯುವಕರ ಪುಂಡಾಟ

- Advertisement -
- Advertisement -

ಕಡಬ;  ಮೊನ್ನೆ ಮೊನ್ನೆಯಷ್ಟೇ ಸುಳ್ಯ ಮಡಿಕೇರಿ ರಸ್ತೆಯಲ್ಲಿ ಕಾರಿನ ಮೇಲೆ ಕುಳಿತು ಪುಂಡಾಟ ಮೆರೆದ ಯುವಕರನ್ನು ಸುಳ್ಯ ಪೊಲೀಸರು ಸುಮೊಟೊ ಕೇಸು ದಾಖಲಿಸಿ ಬಂಧಿಸಿದ್ದರು. ಅದರ ಬೆನ್ನಲ್ಲೇ ಇಂತಹದ್ದೇ ಘಟನೆಯೊಂದು ಏ 27ರ ರಾತ್ರಿ ಕಡಬದಲ್ಲಿ ನಡೆದಿದೆ.

 ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಸುಮಾರು  ಕಡಬದಿಂದ ಆಲಂಕಾರು ವರೆಗೆ 15ಕಿ.ಮೀ ಉದ್ದಕ್ಕೂ  ಹಲವು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರಿ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸಿರುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

ಘಟನೆಗೆ ಸಂಬಂಧಪಟ್ಟಂತೆ ಎರಡು ವೀಡಿಯೋ ತುಣುಕುಗಳು ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಹಲವು ಕಾರಿನಲ್ಲಿ  ಅಪಾಯಕಾರಿ ರೀತಿಯಲ್ಲಿ ಕುಳಿತು ಹೋಗುತ್ತಿರುವುದು  ವೀಡಿಯೋದಲ್ಲಿ ಕಾಣಬಹುದಾಗಿದೆ. ಇದೇ ರೀತಿ ಸುಳ್ಯದಲ್ಲಿ ಇತ್ತೀಚೆಗೆ ಕಾರಿನ ಡೋರ್ ಮತ್ತು ಕಾರಿನ ಮೇಲೆ ಕುಳಿತು ಪುಂಡಾಟ ಮೆರೆದವರ ವಿರುದ್ದ ಸುಳ್ಯ ಪೊಲೀಸರು ಸುಮೊಟೊ ಕೇಸು ದಾಖಲಿಸಿಕೊಂಡಿದ್ದರು. ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿ ಬಂದಿದೆ. ಪೊಲೀಸರು ಈ ವೀಡಿಯೋ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಲು ಮುಂದಾಗಿರುವುದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!