Wednesday, June 24, 2026
Homeಕರಾವಳಿಮಂಗಳೂರುಕಡಬ; ಮಗುವಿನೊಂದಿಗೆ ಮಹಿಳೆ ನಾಪತ್ತೆ

ಕಡಬ; ಮಗುವಿನೊಂದಿಗೆ ಮಹಿಳೆ ನಾಪತ್ತೆ

- Advertisement -
- Advertisement -

ಕಡಬ; ಮಗುವಿನೊಂದಿಗೆ ಮಹಿಳೆ ನಾಪತ್ತೆಯಾಗಿರುವ ಘಟನೆ ಕಡಬದಲ್ಲಿ ನಡೆದಿದೆ. ಕೊಯಿಲ ಗ್ರಾಮ ನಿವಾಸಿ ನೇಹಾ(26) ಮತ್ತು ಮಗ ಮಹಮ್ಮದ್ ನಿಹಾಲ್ (3.5) ನಾಪತ್ತೆಯಾದವರು..


ಕಳೆದ 3 ತಿಂಗಳ ಹಿಂದೆ ನೇಹಾರವರು ತನ್ನ ಗಂಡನೊಂದಿಗೆ ಕೆಲಸಕ್ಕೆಂದು ಬೆಂಗಳೂರಿಗೆ ಹೋಗಿದ್ದರು. ಡಿಸೆಂಬರ್ 25 ರಂದು ಗಂಡ ಊರಿಗೆ ಬಂದಿದ್ದು, ನೇಹಾ ತನ್ನ ಮಗುವಿನೊಂದಿಗೆ ಮನೆಗೂ ಬಾರದೇ, ದೂರವಾಣಿ ಕರೆಗೂ ಸಿಗದೇ ಕಾಣೆಯಾಗಿದ್ದಾರೆ.ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಣೆಯಾದವರ ಚಹರೆ :
ನೇಹಾ: ಎತ್ತರ 152 ಸೆಂ ಮೀ , ಗೋಧಿ ಮೈ ಬಣ್ಣ , ಸಾಧಾರಣ ಶರೀರ ಹೊಂದಿರುತ್ತಾರೆ. ಚೂಡಿದಾರ ಧರಿಸಿರುತ್ತಾರೆ. ಕನ್ನಡ, ಉರ್ದು, ಬ್ಯಾರಿ ಭಾಷೆ ಮಾತನಾಡುತ್ತಾರೆ. ನಿಹಾಲ್: 3.5 ವರ್ಷ, ಸಪೂರ ಶರೀರ. ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಕಡಬ ಪೆೋಲೀಸ್ ಠಾಣೆ ಸಂಪರ್ಕಿಸುವಂತೆ ಪೆೋಲಿಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Latest News

error: Content is protected !!