Sunday, July 5, 2026
Homeಕರಾವಳಿಮಂಗಳೂರುಕಡಬ : ನಾಯಿಮರಿಗಳನ್ನು ಅನಾಥವಾಗಿ ಬಿಟ್ಟು ಹೋದವರನ್ನು ಶಿಕ್ಷಿಸಲು ದೈವದ ಮೊರೆ ಗ್ರಾಮಸ್ಥರು

ಕಡಬ : ನಾಯಿಮರಿಗಳನ್ನು ಅನಾಥವಾಗಿ ಬಿಟ್ಟು ಹೋದವರನ್ನು ಶಿಕ್ಷಿಸಲು ದೈವದ ಮೊರೆ ಗ್ರಾಮಸ್ಥರು

- Advertisement -
- Advertisement -

ಕಡಬ : ನಾಯಿಮರಿಗಳನ್ನು ಅನಾಥವಾಗಿ ಬಿಟ್ಟು ಬಸ್ ತಂಗುದಾಣದಲ್ಲಿ ಬಿಟ್ಟು ಹೋದವರನ್ನು ಶಿಕ್ಷಿಸಲು ಗ್ರಾಮಸ್ಥರು ದೈವದ ಮೊರೆ ಹೋದ ವಿಚಿತ್ರ ಪ್ರಸಂಗ ಕಡಬ ತಾಲೂಕಿವ ಎಡಮಂಗಲ ಗ್ರಾಮದಲ್ಲಿ ನಡೆದಿದೆ.
ಎಡಮಂಗಲ ಗ್ರಾಮದ ನಿಂತಿಕಲ್ ರಸ್ತೆ ಸಮೀಪವಿರುವ ಮಹಾಕಾಳಿ ಬಸ್ ನಿಲ್ದಾಣದಲ್ಲಿ ಇನ್ನೂ ಕಣ್ಣು ಬಿಡದ ಎರಡು ನಾಯಿ ಮರಿಗಳನ್ನು ಪಾಪಿಗಳು ಬಸ್ ತಂಗುದಾಣದಲ್ಲಿ. ತಾಯಿಯಿಂದ ದೂರವಾಗಿ ಅನಾಥವಾಗಿರುವ ಈ ಪುಟ್ಟ ಮರಿಗಳು ಬಸ್ ಸ್ಟ್ಯಾಂಡಿನ ಮೂಲೆಯಲ್ಲಿ ಕುಳಿತು ಹಸಿವು ಮತ್ತು ತಾಯಿ ಇಲ್ಲದೇ ಚಳಿಯಲ್ಲಿ ನಡುಗುತ್ತಿದ್ದವು. ಇದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ ಈ ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಪುಟ್ಟ ನಾಯಿಮರಿಗಳನ್ನು ಅನಾಥವಾಗಿ ಬಿಟ್ಟು ಹೋದ ದುರುಳರನ್ನು ಶಿಕ್ಷಿಸಲು ದೈವದ ಮೊರೆ ಹೋಗಿದ್ದಾರೆ.
‘ನಾಯಿ ಮರಿಗಳನ್ನು ತಂದು ಬಿಟ್ಟವರಿಗೆ ಕೊರಗಜ್ಜನಿಗೆ ಮತ್ತು ಕಾನತ್ತೂರಿಗೆ ಹರಕೆ ಹೇಳುತ್ತೇವೆ. ತೆಗೆದುಕೊಂಡಿ ಹೋಗಿ ಇಲ್ಲದಿದ್ದರೆ…ಎಂದು ಬರೆದು ಬಸ್ ತಂಗುದಾಣದ ಗೋಡೆಗೆ ಅಂಟಿಸಿದ್ದಾರೆ.

- Advertisement -

Latest News

error: Content is protected !!