- Advertisement -


- Advertisement -
ಕಡಬ: ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡು ಥಾರ್ ಜೀಪ್ ಚಾಲಕ ದುಡ್ಡು ಕೊಡದೇ ಪರಾರಿಯಾದ ಘಟನೆ ಕಡಬದ ಹಿಂದೂಸ್ಥಾನ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ.
ಜನವರಿ 22 ರಂದು ಬೆಳಗ್ಗೆ KA01MX9632 ನಂಬರಿನ ಥಾರ್ ಜೀಪ್‌ನ ಚಾಲಕನೊಬ್ಬ, ಕಡಬದ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಗೆ ಬಂದು ತನ್ನ ಜೀಪ್ ಗೆ ಫುಲ್ ಟ್ಯಾಂಕ್ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಂತರ, ಪೆಟ್ರೋಲ್ ಬೇಕೆಂದು ಹೇಳಿ ಬಂಕ್ ಸಿಬ್ಬಂದಿಯನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದ್ದಾನೆ. ಈ ಅವಧಿಯಲ್ಲಿ ಅವನು ಡೀಸೆಲ್ ಹಣ ನೀಡದೆ ಜೀಪ್‌ನಲ್ಲಿ ಎಸ್ಕೇಪ್ ಆಗಿದ್ದಾನೆ.
ಇದೇ ರೀತಿಯ ಘಟನೆ ಡಿಸೆಂಬರ್ 25ರಂದು ಸುಳ್ಯದ ಪೈಚಾರು ಪೆಟ್ರೋಲ್ ಬಂಕ್‌ನಲ್ಲೂ ನಡೆದಿತ್ತು. ಒಬ್ಬ ವ್ಯಕ್ತಿ ಹಲವು ಕಡೆಗಳಲ್ಲಿ ಇದೇ ರೀತಿಯಲ್ಲಿ ವಂಚನೆ ಮಾಡುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


