ಕಡಬ: ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಡಬದ ಬಲ್ಯ ಗ್ರಾಮದ ಬನಾರಿ ನಿವಾಸಿ ಯೋಗೇಂದ್ರ ಕುಮಾರ್ ಎಂಬವರು ಡಿ.2 ರಂದು ಕಡಬದ ಗೌಡ ಸಮಾಜ ಮಂದಿರದಲ್ಲಿ ನಡೆಯುವ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಮೀಟಿಂಗ್ ನಲ್ಲಿ ಭಾಗವಹಿಸಿದ್ದರು. ಮೀಟಿಂಗ್ ಮುಗಿದ ಬಳಿಕ ಸಂಜೆ 5:30 ಗಂಟೆಗೆ ಬಲ್ಯದಲ್ಲಿರುವ ಅವರ ಮನೆಗೆ ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದ ವೇಳೆ ಬಲ್ಯ ಗ್ರಾಮದ ನೆಲ್ಲ ಎಂಬಲ್ಲಿಗೆ ತಲುಪಿದಾಗ ಅವರ ಚಿಕ್ಕಪ್ಪನಾದ ಪುರುಷೋತ್ತಮ್ ಮತ್ತು ಅವರ ಮಗ ಪ್ರಜ್ವಲ್ ಎಂಬುವವರು ಅವರ ಬೈಕಿನಲ್ಲಿ ಬಂದು ಏಕಾಏಕಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಅಲ್ಲಿಯೇ ಮಾರ್ಗದಲ್ಲಿ ಬಿದ್ದಿದ್ದ ಒಂದು ಜಲ್ಲಿ ಕಲ್ಲನ್ನು ತೆಗೆದುಕೊಂಡು ಎದೆಯ ಬಲಭಾಗಕ್ಕೆ ಬಲವಾಗಿ ಗುದ್ದಿರುವುದಾಗಿ ಯೋಗೇಂದ್ರ ಅವರು ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಲ್ಲೆಯ ರಭಸಕ್ಕೆ ಅಲ್ಲಿಯೇ ಬಿದ್ದಿದ್ದು ಅದೇ ವೇಳೆಯಲ್ಲಿ ಅದೇ ದಾರಿಯಲ್ಲಿ ಹಾದು ಹೋಗುತ್ತಿರುವ ವ್ಯಕ್ತಿಯೊಬ್ಬರು ನೋಡಿ ಉಪಚರಿಸಿ ಕೂಡಲೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ, ಯೋಗೇಂದ್ರ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು ಚಿಕಿತ್ಸೆ ನೀಡಿರುತ್ತಾರೆ.ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


