Saturday, June 13, 2026
Homeಕರಾವಳಿಮೆಕ್ಕಾಗೆ ತೆರಳಿದ್ದ ಕಡಬದ ವ್ಯಕ್ತಿ ಹೃದಯಾಘಾತದಿಂದ ನಿಧನ

ಮೆಕ್ಕಾಗೆ ತೆರಳಿದ್ದ ಕಡಬದ ವ್ಯಕ್ತಿ ಹೃದಯಾಘಾತದಿಂದ ನಿಧನ

- Advertisement -
- Advertisement -

ಕಡಬ;ಮೆಕ್ಕಾಗೆ ಉಮ್ರಾ ಯಾತ್ರೆ ತೆರಳಿದ್ದ  ಕಡಬದ ವ್ಯಕ್ತಿಯೋರ್ವರು ಮೆಕ್ಕಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಡಬದ ಕೋಡಿಂಬಾಳದ ನಿವಾಸಿ ಅಬೂಬಕರ್ ಮೃತ ದುರ್ದೈವಿ.ಅಬೂಬಕರ್ ಅವರು ತನ್ನ ಪತ್ನಿ ಜೊತೆ ಉಮ್ರಾ ಯಾತ್ರೆಗೆ ತೆರಳಿದ್ದರು.

ಉಮ್ರಾ ನಿರ್ವಹಣೆ ಬಳಿಕ ಮೆಕ್ಕಾದಲ್ಲಿ ಅಬೂಬಕರ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ.ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ,ಅದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಮೃತದೇಹವನ್ನು ಮಕ್ಕಾದಲ್ಲೇ ದಫನಕ್ರಿಯೆಗೆ ಮುಂದಾಗಿದ್ದಾರೆ.ಅಬೂಬಕ್ಕರ್ ಅವರು ತನ್ನ ಕೊನೆಯ ಯಾತ್ರೆಯ ವೇಳೆ ಕಡಬದ ಸಮೀಪದ ಮಸೀದಿಗೆ ದಾನ ರೂಪದ ಸಹಾಯ ಮಾಡಿ ತೆರಳಿದ್ದರು ಎನ್ನಲಾಗಿದೆ.

- Advertisement -

Latest News

error: Content is protected !!