Thursday, May 16, 2024
Homeಕ್ರೀಡೆ11 ವರ್ಷದ ಬಾಲಕನ ಜೀವ ಉಳಿಸಿದ ಕ್ರಿಕೆಟಿಗ ಕೆ ಎಲ್ ರಾಹುಲ್

11 ವರ್ಷದ ಬಾಲಕನ ಜೀವ ಉಳಿಸಿದ ಕ್ರಿಕೆಟಿಗ ಕೆ ಎಲ್ ರಾಹುಲ್

spot_img
- Advertisement -
- Advertisement -

ಬೆಂಗಳೂರು: ಟೀ ಇಂಡಿಯಾದ ಆರಂಭಿಕ ಆಟಗಾರ ಕೆ ಎಲ್ ರಾಹುಲ್ ಅವರು 11 ವರ್ಷದ ಬಾಲಕನೊಬ್ಬನ ಜೀವ ಉಳಿಸಿದ್ದಾರೆ.

ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಬಾಲಕನ ಚಿಕಿತ್ಸೆಗಾಗಿ ರಾಹುಲ್  31 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.  ಅಂದ್ಹಾಗೆ ಆ ಬಾಲಕನ ಹೆಸರು  ವರದ್ ನಲ್ವಾಡೆ. ಅವನಿಗೆ ತುರ್ತಾಗಿ ಮೂಳೆ ಮಜ್ಜೆಯ ಕಸಿ ಮಾಡಬೇಕಾಗಿದೆ. ಮಗುವಿನ ಪೋಷಕರು ಎನ್‌ಜಿಒ ಮೂಲಕ ಹಣ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದರು. ಈ ವಿಷಯ ತಿಳಿದ ಕೆಎಲ್ ರಾಹುಲ್ ಆ ಮಗುವಿಗೆ ಸಹಾಯ ಮಾಡಿದ್ದಾರೆ.

ವರದ್ ಮಧ್ಯಮ ವರ್ಗದ ಕುಟುಂಬದ ಮಗು. ತಂದೆಯ ಪಿಎಫ್ ಹಣವೂ ಅವರ ಅನಾರೋಗ್ಯಕ್ಕೆ ಖರ್ಚಾಗಿದೆ. ಐದನೇ ತರಗತಿಯಲ್ಲಿ ಓದುತ್ತಿರುವ ವರದ್ ಅವರನ್ನು ಮುಂಬೈನ ಜಸ್ಲೋಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪ್ಲ್ಯಾಸ್ಟಿಕ್ ಅನೀಮಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಖಾಯಿಲೆಯಿಂದಾಗಿ ಸಾಮಾನ್ಯ ಜ್ವರ ಬಂದರೂ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗುತ್ತಿತ್ತು. ವರದ್ ಅವರ ಚಿಕಿತ್ಸೆಗೆ ಅಸ್ಥಿಮಜ್ಜೆ ಕಸಿ ಒಂದೇ ಮಾರ್ಗವಾಗಿದ್ದು, ಕೆಎಲ್ ರಾಹುಲ್ ಈ ಚಿಕಿತ್ಸೆಗೆ ಹಣ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, ‘ನನಗೆ ವರದ್ ಬಗ್ಗೆ ತಿಳಿದಾಗ, ನನ್ನ ತಂಡ ಗಿವ್ ಇಂಡಿಯಾ ಎನ್‌ಜಿಒ ಸಂಸ್ಥೆಯನ್ನು ಸಂಪರ್ಕಿಸಿದೆವು. ಇದರಿಂದ ನಾವು ಅವರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾಯಿತು. ಈಗ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿರುವುದು ಸಂತಸ ತಂದಿದೆ. ವರದ್ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದ್ದು ಅವರ ಕನಸುಗಳನ್ನು ನನಸಾಗಿಸಲು ಪ್ರಯತ್ನಿಸಲಿದ್ದಾರೆ ಎಂದು ಭಾವಿಸುತ್ತೇವೆ. ನನ್ನ ಕೊಡುಗೆಯು ಹೆಚ್ಚು ಹೆಚ್ಚು ಜನರು ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರೇರೇಪಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!