Friday, March 29, 2024
Homeಕ್ರೀಡೆಐಪಿಎಲ್ ಮುಂದಿನ ಪಂದ್ಯಗಳಿಂದ ಹೊರಗುಳಿದ ಕೆಎಲ್ ರಾಹುಲ್

ಐಪಿಎಲ್ ಮುಂದಿನ ಪಂದ್ಯಗಳಿಂದ ಹೊರಗುಳಿದ ಕೆಎಲ್ ರಾಹುಲ್

spot_img
- Advertisement -
- Advertisement -

ವದೆಹಲಿ : ಗಾಯದ ಸಮಸ್ಯೆಯಿಂದಾಗಿ ಕ್ರಿಕೆಟಿಗ ಕೆ ಎಲ್ ರಾಹುಲ್ ಮುಂದಿನ ಐಪಿಎಲ್ ಪಂದ್ಯಗಳಿಂದ ಹೊರಗೆ ಉಳಿಯಲಿದ್ದಾರೆ.  ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದ ಸಮಯದಲ್ಲಿ ಗಾಯಗೊಂಡ ರಾಹುಲ್, ಐಪಿಎಲ್ ಅಷ್ಟೇ ಅಲ್ಲ ಜೂನ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೂಡ ಕೆ.ಎಲ್ ರಾಹುಲ್ ಆಡುವುದಿಲ್ಲ ಎಂದು ಸ್ಪಷ್ಟ ಪಡೆಸಿದ್ದಾರೆ.

ಮೇ 1 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಹುಲ್ ಗಾಯಗೊಂಡಿದ್ದರು. ಈಗ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಮೂಲಕ ರಾಹುಲ್ ಈ ಬೆಳವಣಿಗೆಯನ್ನ ದೃಢಪಡಿಸಿದ್ದಾರೆ. ಇನ್ನು ರಾಹುಲ್ ಅನುಪಸ್ಥಿತಿಯಲ್ಲಿ, ಕ್ರುನಾಲ್ ಪಾಂಡ್ಯ ಲಕ್ನೋ ಫ್ರಾಂಚೈಸಿಯ ನಾಯಕತ್ವವನ್ನ ವಹಿಸಿಕೊಳ್ಳಲಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕೆಎಲ್ ರಾಹುಲ್, ‘ವೈದ್ಯಕೀಯ ತಂಡದೊಂದಿಗೆ ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ನಾನು ಶೀಘ್ರದಲ್ಲೇ ನನ್ನ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತೇನೆ ಎಂದು ತೀರ್ಮಾನಿಸಲಾಗಿದೆ. ಮುಂಬರುವ ವಾರಗಳಲ್ಲಿ ನನ್ನ ಚೇತರಿಕೆಯ ಮೇಲೆ ನನ್ನ ಗಮನ ಇರುತ್ತದೆ ಎಂದಿದ್ದಾರೆ.

- Advertisement -
spot_img

Latest News

error: Content is protected !!