- Advertisement -
- Advertisement -
ಬೆಳಗಾವಿ: ದಾಂಪತ್ಯದಲ್ಲಿ ಬಿರುಕು ಮೂಡಿದ ಕಾರಣಕ್ಕೆ ಖ್ಯಾತ ಗೀತ ಸಾಹಿತಿ ಕೆ. ಕಲ್ಯಾಣ್ ಅವರ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆದರೆ ಈಗ ಕಲ್ಯಾಣ್ ಅವರ ಪತ್ನಿ ಅಶ್ವಿನಿಯವರ ಸೋದರ ಸಂಬಂಧಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ನಿವಾಸಿ ಶಿವಾನಂದ ವಾಲಿ ಅವರ ಬಳಿ ಮಾಟ-ಮಂತ್ರದ ವಸ್ತುಗಳು ಪತ್ತೆಯಾಗಿವೆ ಎನ್ನಲಾಗಿದೆ.ಈ ಮೂಲಕ ಪ್ರಕರಣಕ್ಕೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಶಿವಾನಂದ ವಾಲಿ ವಿರುದ್ಧ ಕಲ್ಯಾಣ್ ಅಪಹರಣ ಆರೋಪ ಮಾಡಿದ್ದಾರೆ. ಆತ ಪತ್ನಿಯನ್ನು ಪುಸಲಾಯಿಸಿ ಖಾತೆಯಿಂದ 19.80 ಲಕ್ಷ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಕಲ್ಯಾಣ್ ದೂರಿದ್ದಾರೆ.ಗೊಂದಲ ಬಗೆಹರಿಯಲಿದೆ. ಪತ್ನಿ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಅದರ ಬಗ್ಗೆಯೂ ಇವತ್ತು ಸ್ಪಷ್ಟಿಕರಣ ನೀಡುತ್ತೇನೆ. .ಎಂದು ಅವರು ಮಾಹಿತಿ ನೀಡಿದ್ದಾರೆ.
- Advertisement -