Thursday, May 23, 2024
Homeಕರಾವಳಿಉಡುಪಿಉಡುಪಿಯಲ್ಲೊಬ್ಬರು ಜ್ಯೂನಿಯರ್ ರಿಷಭ್ ಶೆಟ್ಟಿ

ಉಡುಪಿಯಲ್ಲೊಬ್ಬರು ಜ್ಯೂನಿಯರ್ ರಿಷಭ್ ಶೆಟ್ಟಿ

spot_img
- Advertisement -
- Advertisement -

ಉಡುಪಿ; ಕಾಂತಾರ ಸಿನಿಮಾದ ಮೂಲಕ ರಿಷಭ್ ವಿಶ್ವದಾದ್ಯಂತ ಅಭಿಮಾನಿಗಳು ಹೊಂದಿದ್ದಾರೆ. ಹೀಗಿರುವಾಗಲೇ ರಿಷಭ್ ಶೆಟ್ಟಿ ಅವರ ಊರು ಉಡುಪಿಯಲ್ಲಿ ಅವರನ್ನೇ ಹೋಲುವ ವ್ಯಕ್ತಿಯೊಬ್ಬರು ಗಮನ ಸೆಳೆಯುತ್ತಿದ್ದಾರೆ.

ಅಂದ್ಹಾಗೆ ಜೂನಿಯರ್ ರಿಷಬ್ ಶೆಟ್ಟಿಯ ನಿಜ ಹೆಸರು ಪ್ರದೀಪ್ ಆಚಾರ್ಯ. ನೋಡೊದಕ್ಕೆ ಥೇಟ್ ರಿಷಬ್ ಥರಾನೇ ಕಾಣಿಸ್ತಾರೆ. ರಿಷಭ್ ಅವರ ತದ್ರೂಪದಂತಿದ್ದಾರೆ ಪ್ರದೀಪ್. ಕಾಂತಾರ ಸಿನಿಮಾದ ಬಳಿಕ ಪ್ರದೀಪ್‌ಗೀಗ ಉಡುಪಿಯಲ್ಲಿ ಫುಲ್ ಡಿಮ್ಯಾಂಡ್ ಬಂದಿದೆ. ಈಗಾಗಲೇ ಹೋಟೆಲ್ ಜಾಹೀರಾತಿನಲ್ಲೂ ನಟಿಸಿದ್ದಾರೆ.

ಉಡುಪಿ ಶಿರ್ವದಲ್ಲಿ ಆಯುಷ್ ಅನ್ನುವ ಮೊಬೈಲ್ ಶಾಪ್‌ನಲ್ಲಿ ಕಳೆದ 7 ವರ್ಷದಿಂದ ಪ್ರದೀಪ್ ವಿವೋ ಮೊಬೈಲ್ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದಾರೆ.  ಇನ್ನು “ನಾನು ಮೊಬೈಲ್ ಶಾಪ್‌ನಲ್ಲಿ ವರ್ಕ್ ಮಾಡುತ್ತಿದ್ದೆ. ಬಂದವರೆಲ್ಲಾ ರಿಷಬ್ ಶೆಟ್ಟಿಯವರ ಹಾಗೆ ಕಾಣಿಸುತ್ತೀಯ ಅಂತ ಹೇಳುತ್ತಿದ್ದರು. ಹಾಗೇ ಮೊಬೈಲ್‌ ಶಾಪ್‌ ಬಂದ ಕಸ್ಟಮರ್‌ಗಳೂ ಕೂಡ ಹಾಗೆ ಹೇಳುವುದಕ್ಕೆ ಶುರು ಮಾಡಿದ್ದರು. ಆ ಮೇಲೆ ಸ್ನೇಹಿತರು ರೀಲ್ಸ್ ಮಾಡೋಣ ಅಂತ ಹೇಳಿದ್ರು. ಒಂದು ರೀಲ್ ಮಾಡಿದ್ದೆ ಅಷ್ಟೇ. ಹಾಗೆ ಮಾಡಿ ನಾನು ಕಾಂತಾರ ಗೆಟಪ್‌ನಲ್ಲೇ ವಾಪಸ್ ಬರುತ್ತಿದ್ದೆ. ರೀಲ್ಸ್ ವೈರಲ್ ಆಗಿ ನಾನು ಫೇಮಸ್ ಆದೆ ಅಂತಾ ಪ್ರದೀಪ್ ಹೇಳಿದ್ದಾರೆ. ಕಾಂತಾರ ಬಂದ್ಮೇಲೆ ಎಲ್ಲರೂ ಗುರುತಿಸೋಕೆ ಶುರು ಮಾಡಿದ್ದರು.ಇದರಿಂದ ತುಂಬಾ ಖುಷಿಯಾಗುತ್ತದೆ ಎಂದು ಪ್ರದೀಪ್ ಹೇಳಿದ್ದಾರೆ.

- Advertisement -
spot_img

Latest News

error: Content is protected !!