Wednesday, April 16, 2025
Homeಮನರಂಜನೆಕೊರೊನಾ ಆತಂಕದ ಮಧ್ಯೆ ಜೊತೆಜೊತೆಯಲಿ ಶೂಟಿಂಗ್ ಹೇಗೆ ನಡಿತಿದೆ ಗೊತ್ತಾ?

ಕೊರೊನಾ ಆತಂಕದ ಮಧ್ಯೆ ಜೊತೆಜೊತೆಯಲಿ ಶೂಟಿಂಗ್ ಹೇಗೆ ನಡಿತಿದೆ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ಕೊರೊನಾ ಅನ್ನೋ ಮಹಾಮಾರಿ ತನ್ನ ಕಬಂಧ ಬಾಹುಗಳನ್ನು ಚಾಚದೇ ಇರುವಂತಹ ಕ್ಷೇತ್ರಗಳಿಲ್ಲ. ಯಾರಿಗೂ ಕೂಡ ಸದ್ಯಕ್ಕೆ ಚೇತರಿಸಿಕೊಳ್ಳೋದಕ್ಕೆ ಸಾಧ್ಯವಾಗದೇ ಇರುವಂತಹ ಹೊಡೆತವನ್ನೇ ನೀಡಿದೆ ಈ ಕೊರೊನಾ.

ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶೂಟಿಂಗ್ ಮಾಡ್ತಾ ಇದ್ದೀವಿ. ನಿಮ್ಮ ಪ್ರೋತ್ಸಾಹ ಯಾವಾಗಲೂ ಹೀಗೆ ಇರಲಿ.#jothejotheyalli#aroorjagadish#anusirimane#zeekannada

Posted by Aroor Jagadish on Friday, 26 June 2020

ಕೊರೊನಾ ಕನ್ನಡ ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೂ ಸಾಕಷ್ಟು ನಷ್ಟವನ್ನು ಉಂಟುಮಾಡಿದೆ. ಲೌಕ್ ಡೌನ್ ಸಮಯದಲ್ಲಿ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರ ಎರಡೂ ಕೂಡ ಮಗಾಡೆ ಮಲಗಿತ್ತು ಎಂದರೆ ತಪ್ಪಾಗಲಾರದು. ಸುಮಾರು ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ಧಾರಾವಾಹಿಗಳ ಪ್ರಸಾರ ನಿಂತು ಹೋಗಿತ್ತು. ಹಳೇ ಸಂಚಿಕೆಗಳನ್ನೇ ಮರುಪ್ರಸಾರ ಮಾಡಲಾಗುತ್ತಿತ್ತು. ಸರ್ಕಾರ ಶೂಟಿಂಗ್ ನಡೆಸೋದಕ್ಕೆ ಅವಕಾಶ ನೀಡಿದ ಬಳಿಕವಷ್ಟೇ ಮತ್ತೆ ಹೊಸ ಎಪಿಸೋಡ್ ಗಳು ಪ್ರಸಾರವಾಗೋದಕ್ಕೆ ಆರಂಭವಾದವು. ಇದೀಗ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಹಾಗೇ ಟಿಆರ್ ಪಿಯಲ್ಲಿ ದಾಖಲೆ ಮಾಡಿರುವ ಜೊತೆಜೊತೆಯಲಿ ಸೀರಿಯಲ್ ನ ಶೂಟಿಂಗ್ ನ ವಿಡಿಯೋ ಒಂದನ್ನು ಅದರ ನಿರ್ದೇಶಕರಾದ ಆರೂರು ಜಗದೀಶ್ ಅವರು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ನಾವು ಹೇಗೆ ಶೂಟಿಂಗ್ ಮಾಡುತ್ತಿದ್ದೇವೆ ನೋಡಿ ಅಂತಾ ಟ್ಯಾಗ್ ಲೈನ್ ಕೂಡ ಕೊಟ್ಟಿದ್ದಾರೆ ನಿರ್ದೇಶಕರು.       

- Advertisement -
spot_img

Latest News

error: Content is protected !!