- Advertisement -
- Advertisement -
ಬೆಂಗಳೂರು;ಕೈಯಲ್ಲಿ ಲಾಂಗ್ ಹಿಡಿದು ಶೋಕಿಗಾಗಿ ರೀಲ್ಸ್ ಮಾಡಿ ಇದೀಗ ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಗೌಡ ಹಾಗೂ ರಜತ್ ಕಿಶನ್ ಜೈಲು ಸೇರಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿಗಳಾದ ವಿನಯ್ ಹಾಗೂ ರಜತ್ ರನ್ನು 3 ದಿನಗಳ ಕಾಲ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ನೀಡಿದೆ.
ಇಂದು ಆರೋಪಿಗಳಾದ ರಜತ್ ಹಾಗೂ ವಿನಯ್ ಗೌಡರನ್ನು 24ನೇ ಎಸಿಎಂಎಂ ಕೋರ್ಟ್ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. 5 ದಿನ ಕಸ್ಟಡಿಗೆ ನೀಡುವಂತೆ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಮಾ.28ರವರೆಗೆ ಪೊಲೀಸ್ ಕಸ್ಟಡಿಗೆ ಕೋರ್ಟ್ ಆದೇಶ ನೀಡಿದೆ.
ಇನ್ನೂ ರಜತ್ ಅವರು ದರ್ಶನ್ ನಟನೆಯ ‘ಕರಿಯ’ ಸಿನಿಮಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಇತ್ತ ವಿನಯ್ ಪುಷ್ಪರಾಜ್ ಲುಕ್‌ನಲ್ಲಿ ಮಚ್ಚು ಹಿಡಿದು ಇಬ್ಬರು ರೀಲ್ಸ್ ಮಾಡಿದ್ದರು. ಇದರಿಂದ ಈಗ ಇಬ್ಬರೂ ಕಾನೂನು ಸಂಕಷ್ಟ ಎದುರಿಸುವಂತಾಗಿದೆ.
- Advertisement -