- Advertisement -
![]()
- Advertisement -
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ನಾಳೆ ಸಿ. ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಚೆನ್ನೈನ ನೆಹರು ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ನಿನ್ನೆ ನಾಲ್ಕನೇ ಬಾರಿಗೆ ತಮಿಳುನಾಡು ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್ 120 ಸದಸ್ಯರ ಬೆಂಬಲದ ಪಟ್ಟಿಯಲ್ಲಿ ಸಲ್ಲಿಸಿದ್ದಾರೆ.ಅಗತ್ಯ ಸಂಖ್ಯಾ ಬಲದ ಹಿನ್ನೆಲೆಯಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದು, ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಮತ್ತು ಮುಸ್ಲಿಂ ಲೀಗ್ ಬೆಂಬಲದೊಂದಿಗೆ ಟಿವಿಕೆ ಪಕ್ಷ ಬಹುಮತಕ್ಕೆ ಬೇಕಾಗಿರುವ 118 ಸ್ಥಾನಗಳನ್ನು ದಾಟಿದೆ. ಇಂದು ವಿಜಯ್ ಜೊತೆ ಒಂಬತ್ತು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
- Advertisement -


