- Advertisement -
![]()
- Advertisement -
ಮಂಗಳೂರು: ಶಿರಾಡಿ ಘಾಟ್ ನಲ್ಲಿ ಸುರಂಗ ಮಾರ್ಗ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ರೈಲ್-ರೋಡ್ ಸುರಂಗ ಸಮೀಕ್ಷೆಗೆ ಕೇಂದ್ರ ಸರ್ಕಾರದಿಂದ ಸಮಿತಿ ರಚನೆಯಾಗಿದೆ.
ಕೇಂದ್ರ ಹೆದ್ದಾರಿ ಸಚಿವಾಲಯದಿಂದ ಸಮಿತಿ ರಚನೆಯಾಗಿದ್ದು, ಈ ಬಗ್ಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆ ಸಚಿವ ನಿತಿನ್ ಗಡ್ಕರಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.

ಸುರಂಗ ಯೋಜನೆಯ ಕಾರ್ಯ ಸಾಧ್ಯತೆಯನ್ನು ಜಂಟಿ ಸಮಿತಿ ಪರಿಶೀಲಿಸಲಿದ್ದು, ರೈಲು ಹಾಗೂ ರಸ್ತೆ ಸುರಂಗ ಯೋಜನೆಯ ಸಾಧ್ಯತೆಗಳ ಬಗ್ಗೆ ತಂಡದಿಂದ ಅಧ್ಯಯನ ನಡೆಯಲಿದೆ.
ಸುರಂಗ ನಿರ್ಮಾಣ ಕುರಿತು ಜಂಟಿ ಸಮೀಕ್ಷೆ ನಡೆಸಲು ತಜ್ಞರ ಸಮಿತಿ ನೇಮಿಸುವಂತೆ ಕೋರಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಸಂಸದ ಬ್ರಿಜೇಶ್ ಚೌಟ ಪತ್ರ ಬರೆದಿದ್ದರು.
- Advertisement -


