Monday, April 29, 2024
Homeತಾಜಾ ಸುದ್ದಿದೇಶದ ಅತೀ ಕಿರಿಯ ಶಾಸಕನನ್ನು ವಿವಾಹವಾದ ದೇಶದ ಅತೀ ಕಿರಿಯ ಮೇಯರ್; ದೇವರ ನಾಡಿನಲ್ಲಿ ನಡೆಯಿತೊಂದು...

ದೇಶದ ಅತೀ ಕಿರಿಯ ಶಾಸಕನನ್ನು ವಿವಾಹವಾದ ದೇಶದ ಅತೀ ಕಿರಿಯ ಮೇಯರ್; ದೇವರ ನಾಡಿನಲ್ಲಿ ನಡೆಯಿತೊಂದು ಅಪರೂಪದ ಕಲ್ಯಾಣ

spot_img
- Advertisement -
- Advertisement -

ಕೇರಳ​: ದೇವರನಾಡು ಕೇರಳ ಅಪರೂಪ ವಿವಾಹವೊಂದಕ್ಕೆ ಸಾಕ್ಷಿಯಾಗಿದೆ. ದೇಶದ ಅತಿ ಕಿರಿಯ ಮೇಯರ್ ಆರ್ಯಾ ರಾಜೇಂದ್ರನ್ ಹಾಗೂ ಕೇರಳದ ಅತಿ ಕಿರಿಯ ಶಾಸಕ ಕೆ.ಎಂ. ಸಚಿನ್ ದೇವ್ ಜೊತೆ ನಿನ್ನೆ​​​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಿರುವನಂತಪುರದ ಎಕೆಜಿ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಸರಳ ಮದುವೆ ಸಮಾರಂಭದಲ್ಲಿ ಇಬ್ಬರು ಸಪ್ತಪದಿ ತುಳಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್​, ಸಚಿವರು, ಪಕ್ಷದ ಕಾರ್ಯಕರ್ತರು, ಬಂಧು-ಬಳಗ ಹಾಗೂ ಸ್ನೇಹ ಬಳಗ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರು. ಸರಳವಾಗಿ ಮದುವೆ ಆಗುವುದಾಗಿ ಆಹ್ವಾನ ಪತ್ರಿಕೆಯಲ್ಲಿ ಮೊದಲೇ ಇಬ್ಬರು ಉಲ್ಲೇಖಿಸಿದ್ದರು. ಸೆ.6ರಂದು ಮದುವೆ ಆರತಕ್ಷತೆ ಕೋಯಿಕ್ಕೋಡ್​ನ ಠಾಗೋರ್​ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ.

ತಿರುವನಂತಪುರದ ಮೇಯರ್​ ಆರ್ಯಾ ರಾಜೇಂದ್ರನ್ (21) ಹಾಗೂ ಬಲುಸ್ಸೆರಿ ಕ್ಷೇತ್ರದ ಶಾಸಕ ಕೆ.ಎಂ. ಸಚಿನ್ ದೇವ್​​​ (28) ಅವರ ನಿಶ್ಚಿತಾರ್ಥ ಕಳೆದ ಮಾರ್ಚ್​ನಲ್ಲಿ ನಡೆದಿತ್ತು. ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಭಾರತೀಯ ಮಕ್ಕಳ ಸಂಘಟನೆಯ ವಿಭಾಗ ಬಾಲಸಂಗಮದಿಂದಲೂ ಇಬ್ಬರು ಪರಸ್ಪರ ಪರಿಚಿತರಾಗಿದ್ದಾರೆ. ಸಚಿನ್​ ಕೇರಳ ವಿಧಾನಸಭೆಯ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಇನ್ನೊಂದೆಡೆ ಆರ್ಯಾ ರಾಜೇಂದ್ರನ್ ದೇಶದ ಕಿರಿಯ ಮೇಯರ್​ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

- Advertisement -
spot_img

Latest News

error: Content is protected !!