Thursday, June 25, 2026
Homeಕರಾವಳಿಕಡಬ: ನಿಯಂತ್ರಣ ತಪ್ಪಿ ತಂದೆ ಮೇಲೆ ಮಗುಚಿ ಬಿದ್ದ ಮಗ ಚಲಾಯಿಸುತ್ತಿದ್ದ ಜೀಪು; ವಾಹನದಡಿಗೆ ಬಿದ್ದು...

ಕಡಬ: ನಿಯಂತ್ರಣ ತಪ್ಪಿ ತಂದೆ ಮೇಲೆ ಮಗುಚಿ ಬಿದ್ದ ಮಗ ಚಲಾಯಿಸುತ್ತಿದ್ದ ಜೀಪು; ವಾಹನದಡಿಗೆ ಬಿದ್ದು ಅಪ್ಪ ಸಾವು

- Advertisement -
- Advertisement -

ಕಡಬ: ಹಿರಿಯ ವ್ಯಕ್ತಿಯೊಬ್ಬರು ತಮ್ಮ ಮಗನ ಜೀಪಿನ ಅಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಬಿಳಿನೆಲೆ ಮಣ್ಣಿನ ರಸ್ತೆ ಯಲ್ಲಿ ನಡೆದಿದೆ. ಕಡಬ ತಾಲೂಕು ಬಿಳಿನೆಲೆ ನಿವಾಸಿ ಧರ್ಮಪಾಲ ( 68ವ) ಮೃತಪಟ್ಟವರು.

ಘಟನೆಯ ವಿವರ: ಮೃತರ ಮಗ ಕಚ್ಚಾ ಮಣ್ಣಿನ ಏರು ರಸ್ತೆಯಲ್ಲಿ ಜೀಪನ್ನು ಚಾಲಯಿಸುತ್ತಿದ್ದರು. ಈ ಸಂದರ್ಭದಲ್ಲಿ ಮೇಲೆ‌ ಏರದ ಹಿನ್ನಲೆ ಜೀಪಿನಲ್ಲಿದ್ದ ತಂದೆ ಧರ್ಮಪಾಲರು ಕೆಳಗೆ ಇಳಿದು ವಾಹನದ ಹಿಂಬದಿ ನಿಂತಿದ್ದರು ಎನ್ನಲಾಗಿದೆ. ಆದರೆ ಜೀಪು ಏಕಾಏಕಿ ಹಿಮ್ಮುಖವಾಗಿ ಚಲಾಯಿಸಿದ ಕಾರಣ ನಿಯಂತ್ರಣ ಕಳೆದುಕೊಂಡು ಹಿಂಬದಿ ನಿಂತಿದ್ದವರ ಮೇಲೆ‌ ಮಗುಚಿ ಬಿದ್ದಿದೆ ಎನ್ನಲಾಗಿದೆ.

ತಂದೆಯನ್ನು ಕೂಡಲೇ ಸ್ಥಳೀಯರು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆದರೆ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. 

ಈ ಘಟನೆಯ ಬಗ್ಗೆ ನಾಗೇಶ ಎಂಬವರು ನೀಡಿದ ದೂರಿನಂತೆ ಠಾಣೆಯಲ್ಲಿ ಅ.ಕ್ರ 54/2025 ಕಲಂ 281,106 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!