
ಬೆಂಗಳೂರು: ರಾಜ್ಯಸಭೆ ಚುನಾವಣೆಯ ಮತದಾನದಲ್ಲಿ ಮೊದಲ ಅಡ್ಡಮತದಾನವೊಂದು ದಾಖಲಾಗಿದ್ದು, ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದಾರೆ. ರಾಜ್ಯಸಭೆ ಚುನಾವಣೆ ಸಂಬಂಧ ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ನಡೆಯುತ್ತಿರುವ ಮತದಾನ ಪ್ರಕ್ರಿಯೆಯಲ್ಲಿ ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪರ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತ ಚಲಾವಣೆಯ ಬಳಿಕ ಪೋಲಿಂಗ್ ಏಜೆಂಟರಿಗೆ ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ತೋರಿಸುವ ಸಂದರ್ಭದಲ್ಲಿ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಪರ ತಮ್ಮ ಮತ ಚಲಾಯಿಸಿರುವುದು ಗೊತ್ತಾಗಿದೆ.
ಮತದಾನದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಈ ಸಂಬಂಧ ಪ್ರಶ್ನಿಸಿದಾಗ, “ಅದನ್ನೆಲ್ಲಾ ಇಲ್ಲಿ ಹೇಳುವುದಕ್ಕೆ ಆಗುವುದಿಲ್ಲ. ಮತದಾನದ ಕೌಂಟಿಂಗ್ ನಡೆದಾಗ ನಿಮಗೇ ತಿಳಿಯುತ್ತದೆ,” ಎಂದು ಹೇಳಿದರು.ಶ್ರೀನಿವಾಸಗೌಡ ಜೆಡಿಎಸ್ ಶಾಸಕರಾದರೂ ಸಹ ಕಳೆದೊಂದು ವರ್ಷದಿಂದಲೂ ಜೆಡಿಎಸ್ ನಾಯಕರನ್ನು ಟೀಕಿಸುತ್ತಾ, ಕಾಂಗ್ರೆಸ್ ನಾಯಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಸ್ಥಳೀಯ ಕಾರ್ಯತಕರ್ತರಲ್ಲಿ ವೈರತ್ವ ಬೆಳಸಿಕೊಂಡಿದ್ದಾರೆ.


