Saturday, June 28, 2025
Homeಕೊಡಗುಮಡಿಕೇರಿಯಲ್ಲಿ ಬ್ರೇಕ್ ಫೇಲಾಗಿ ಕಾರ್ಮಿಕನ ಮೇಲೆ ಹರಿದ ಜೆಸಿಬಿ ; ಸ್ಥಳದಲ್ಲೇ ಸಾವು

ಮಡಿಕೇರಿಯಲ್ಲಿ ಬ್ರೇಕ್ ಫೇಲಾಗಿ ಕಾರ್ಮಿಕನ ಮೇಲೆ ಹರಿದ ಜೆಸಿಬಿ ; ಸ್ಥಳದಲ್ಲೇ ಸಾವು

spot_img
- Advertisement -
- Advertisement -

ಮಡಿಕೇರಿ : ಬ್ರೇಕ್ ವಿಫಲಗೊಂಡು ಹಿಮ್ಮುಖವಾಗಿ ಚಲಿಸಿದ ಜೆಸಿಬಿಯಡಿಗೆ ಸಿಲುಕಿ ಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿಯ ಕೂಟುಹೊಳೆ ಬಳಿ ಗುರುವಾರ ನಡೆದಿದೆ.


ಹಾಸನ ಮೂಲದ ಕಾರ್ಮಿಕ ಸಂತೋಷ್(22) ಮೃತ ದುರ್ದೈವಿಯಾಗಿದ್ದಾರೆ.


ಜೆಸಿಬಿಯ ಬ್ರೇಕ್ ವಿಫಲಗೊಂಡು ಇಳಿಜಾರಿನಲ್ಲಿ ಹಿಮ್ಮುಖವಾಗಿ ಚಲಿಸಿದೆ. ಈ ಸಂದರ್ಭ ಕಾರ್ಮಿಕ ಸಂತೋಷ್ ಜೆಸಿಬಿಯಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಒಂದು ಕಾಲು ದೇಹದಿಂದ ಬೇರ್ಪಟ್ಟಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

- Advertisement -
spot_img

Latest News

error: Content is protected !!