- Advertisement -
![]()
- Advertisement -
ಜಮ್ಮು-ಕಾಶ್ಮೀರ: ಪಹಲ್ಗಾಮ್‌ನಲ್ಲಿ ಏ. 22 ರಂದು ನಡೆದ ಉಗ್ರರ ದಾಳಿಗೆ ಕೇಂದ್ರ ಸರ್ಕಾರವು ಪ್ರತ್ಯುತ್ತರವಾಗಿ ಪಾಕ್ ಜತೆಗಿನ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಿದ್ದು, ಇದೀಗ ಕೇಂದ್ರದ ಏ ನಿರ್ಧಾರವನ್ನು ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ಅವರು ಸ್ವಾಗತಿಸಿದ್ದಾರೆ.
ಭಾರತವು ಪಾಕ್ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅವುಗಳಲ್ಲಿ ಒಂದಾಗಿ ಕೇಂದ್ರ ಸರ್ಕಾರವು ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸಲು ನಿರ್ಧಾರ ಮಾಡಿತ್ತು.
ಇನ್ನು ಈಗಾಗಲೇ ಕೇಂದ್ರದ ಸಿಂಧೂ ಜಲ ಒಪ್ಪಂದದಿಂದ ಕಾಶ್ಮೀರಕ್ಕೆ ಸಾಕಷ್ಟು ನಷ್ಟವಾಗಿದ್ದು, ಇದೀಗ ಈ ಒಪ್ಪಂದವನ್ನು ಅಮಾನತುಗೊಳಿಸುವುದರಿಂದ ಜಮ್ಮು-ಕಾಶ್ಮೀರದ ಪ್ರಯೋಜನವಾದರೆ ಅದು ಒಳ್ಳೆಯ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ.
- Advertisement -


