Saturday, May 11, 2024
Homeತಾಜಾ ಸುದ್ದಿನಿತ್ಯಾನಂದ ಜೊತೆ ಮದುವೆ ಆಗುವೆ ಎಂದಿದ್ದ ನಟಿ ಪ್ರಿಯಾ ಆನಂದ್: ಕೊನೆಗೂ ಸ್ಪಷ್ಟನೆ ನೀಡಿದ 'ಜೇಮ್ಸ್'...

ನಿತ್ಯಾನಂದ ಜೊತೆ ಮದುವೆ ಆಗುವೆ ಎಂದಿದ್ದ ನಟಿ ಪ್ರಿಯಾ ಆನಂದ್: ಕೊನೆಗೂ ಸ್ಪಷ್ಟನೆ ನೀಡಿದ ‘ಜೇಮ್ಸ್’ ನಟಿ!

spot_img
- Advertisement -
- Advertisement -

ಬಹುಭಾಷಾ ನಟಿ ನಟಿ ಪ್ರಿಯಾ ಆನಂದ್ ಅವರು ಈಚೆಗೆ ನೀಡಿದ ಒಂದು ಹೇಳಿಕೆ ಸಖತ್ ಸದ್ದು ಮಾಡಿತ್ತು. ‘ನಾನು ನಿತ್ಯಾನಂದರನ್ನು ಮದುವೆ ಆಗಲು ಬಯಸಿದ್ದೇನೆ…’ ಎಂದು ಪ್ರಿಯಾ ಆನಂದ್ ಹೇಳಿದ್ದೇ ತಡ, ಈ ಸುದ್ದಿ ಸಖತ್ ವೈರಲ್ ಆಯ್ತು. ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದವು. ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ತುಂಬ ಚರ್ಚೆ ಆಗುತ್ತಲೇ ಇದೆ. ಯಾವ ತಮ್ಮ ಹೇಳಿಕೆ ಬಗ್ಗೆ ತುಂಬ ಚರ್ಚೆ ಆಗುತ್ತಿದೆ ಎಂಬುದು ಪ್ರಿಯಾಗೆ ತಿಳಿಯಿತೋ, ತಕ್ಷಣವೇ ಆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಈ ರೀತಿ ಹೇಳಿದ್ದು ಕೇವಲ ತಮಾಷೆಗಾಗಿ ಅಷ್ಟೇ..’ ಎಂದು ಎಲ್ಲದಕ್ಕೂ ಅಂತ್ಯ ಹಾಡುವ ಪ್ರಯತ್ನ ಮಾಡಿದ್ದಾರೆ.

ತಮ್ಮ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದ್ದರಿಂದ ಆ ಕುರಿತು ಪ್ರಿಯಾ ಆನಂದ್ ಸ್ಪಷ್ಟನೆ ನೀಡಿದ್ದಾರೆ. ‘ನಾನು ಈ ರೀತಿ ಹೇಳಿದ್ದು ಕೇವಲ ತಮಾಷೆಗಾಗಿ ಅಷ್ಟೇ. ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಸ್‌, ಮೀಮ್ಸ್‌, ವಿಡಿಯೊಗಳು ನನಗೆ ತುಂಬಾ ಇಷ್ಟ. ನಾನು ಮದುವೆ ಆಗುತ್ತೇನೆ ಎಂದಿದ್ದು ಸುಮ್ಮನೆ ಹಾಸ್ಯಕ್ಕೆ. ಅದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ..’ ಎಂದು ಪ್ರಿಯಾ ಆನಂದ್ ಹೇಳಿದ್ದಾರೆ.

ಈಚೆಗೆ ಸಂದರ್ಶನವೊಂದರಲ್ಲಿ ಪ್ರಿಯಾ ಆನಂದ್, ‘ನಾನು ನಿತ್ಯಾನಂದರನ್ನು ಮದುವೆ ಆಗಲು ಬಯಸಿದ್ದೇನೆ. ಅವರ ಬಗ್ಗೆ ಏನೇ ಅರೋಪಗಳು ಇದ್ದರೂ ಅನೇಕ ಜನರು ಅವರನ್ನು ಇಷ್ಟಪಡುತ್ತಾರೆ. ಹಾಗಾದರೆ, ನಿತ್ಯಾನಂದ ಅವರಲ್ಲಿ ಏನೋ ಒಂದು ವಿಶೇಷ ಗುಣ ಇರಲೇಬೇಕಲ್ಲವೇ..? ನಿತ್ಯಾನಂದ ಅವರನ್ನು ನಾನು ಮದುವೆ ಆದರೆ ನನ್ನ ಸರ್‌ನೇಮ್ ಕೂಡ ಬದಲಾಯಿಸಿಕೊಳ್ಳಬೇಕಿಲ್ಲ. ಏಕೆಂದರೆ, ನಮ್ಮಿಬ್ಬರ ಹೆಸರು ಹೆಚ್ಚೂ ಕಡಿಮೆ ಒಂದೇ ರೀತಿ ಇದೆ..’ ಎಂದು ಹೇಳಿದ್ದರು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಂದಹಾಗೆ, ಅತ್ಯಾಚಾರ ಪ್ರಕರಣ ಸೇರಿದಂತೆ ಸಾಕಷ್ಟು ಗಂಭೀರ ಆರೋಪಗಳು ನಿತ್ಯಾನಂದ ವಿರುದ್ಧ ಇವೆ. ಆದರೂ, ಅವರನ್ನು ಫಾಲೋ ಮಾಡುವ ಭಕ್ತಾದಿಗಳ ಸಂಖ್ಯೆ ಏನೂ ಕಮ್ಮಿ ಇಲ್ಲ. ಈ ಮಧ್ಯೆ ಕೈಲಾಸ ಎಂಬ ಹೊಸ ದ್ವೀಪ ರಾಷ್ಟ್ರವನ್ನು ನಿತ್ಯಾನಂದ ನಿರ್ಮಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!